This is the title of the web page

26 ನಿಮಿಷ ತಡವಾಗಿ ಇಳಿಯಿತು ಮುಖ್ಯಮಂತ್ರಿಗಳ ವಿಮಾನ

ಹುಬ್ಬಳ್ಳಿ, 10- ಕೆಟ್ಟ ಹವಾಮಾನದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯಾಣಿಸುತ್ತಿದ್ದ ಬೆಂಗಳೂರು-ಹುಬ್ಬಳ್ಳಿ ಇಂಡಿಗೋ 6E7227 ವಿಮಾನವು ಹುಬ್ಬಳ್ಳಿ ನಿಲ್ದಾಣದಲ್ಲಿ 26 ನಿಮಿಷ ತಡವಾಗಿ ಇಳಿಯಿತು.

ವಿಮಾನ ಹುಬ್ಬಳ್ಳಿಗೆ ಬೆಳಿಗ್ಗೆ ಸರಿಯಾಗಿ 7:30 ಕ್ಕೆ ತಲುಪಿತ್ತು. ಆದರೆ ವಿಪರೀತ ಮಂಜಿನ ಕಾರಣ ವಿಮಾನ ಇಳಿಸಲು ಪರವಾನಗಿ ದೊರೆಯದೇ ಸುಮಾರು 10 ನಿಮಿಷ ಆಕಾಶದಲ್ಲೇ ಮೂರು ಸುತ್ತು ಸುತ್ತಿ ನಂತರ ಸುರಕ್ಷಿತವಾಗಿ ಇಳಿಯಿತು.

ವಿಧಾನ ಪರಿಷತ್ ಚುನಾವಣೆಗೆ ಶಿಗ್ಗಾವಿಯಲ್ಲಿ ಮತದಾನದ ಹಕ್ಕು ಹೊಂದಿರುವ ಮುಖ್ಯಮಂತ್ರಿ ಗಳು ಅದನ್ನು ಚಲಾಯಿಸಲು ಬಂದಿದ್ದರು. ಸಂಜೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಅವರು ಬೆಂಗಳೂರಿಗೆ ಹಿಂದಿರುಗುವರು.

You might also like
Leave a comment