Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ 


ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇದೀಗ ಆದೇಶವನ್ನು ಹಿಂಪಡೆದಿದೆ. ಎಂದಿನಂತೆ ಪಠ್ಯವನ್ನು ಮುಂದುವರೆಸಲು ಪರಿಷ್ಕೃತ ಆದೇಶದಲ್ಲಿ ಸೂಚಿಸಲಾಗಿದೆ.

2022-23 ನೇ ಸಾಲಿನ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯವನ್ನು ಸರ್ಕಾರ ಪರಿಷ್ಕರಿಸಿತ್ತು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ದೇವನೂರು ಮಹಾದೇವ ಸೇರಿ 7 ಲೇಖಕರು ತಾವು ಪಠ್ಯಕ್ಕಾಗಿ ನೀಡಿದ್ದ ಗದ್ಯ-ಪದ್ಯವನ್ನು ಕೈ ಬಿಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಆ ಪಠ್ಯವನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು.

ಆದರೆ ಈ ಪಠ್ಯವನ್ನು ಶಿಕ್ಷಕರು ಬೋಧಿಸಿದ್ದು, ಮಕ್ಕಳೂ ಅಭ್ಯಾಸ ಮಾಡಿದ್ದರು. ಹೀಗಾಗಿ ಈ ಮೊದಲಿನ ಆದೇಶ ಹಿಂಪಡೆದು ಪ್ರಸಕ್ತ ಸಾಲಿಗೆ ಸೀಮಿತವಾಗಿ ಈ ಮೊದಲಿನಂತೆಯೇ ಪಠ್ಯ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.


A B Dharwadkar
the authorA B Dharwadkar

Leave a Reply