This is the title of the web page

ರಾಯಭಾರಿ ಅಧಿಕಾರಿಗಳು ಸಹಾಯಕ್ಕೆ ಬರಲಿಲ್ಲ -ನವೀನ ತಂದೆಯ ದೂರು

ಹಾವೇರಿ, 1- ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ ಸಾವನ್ನಪ್ಪಿದ್ದ ನಂತರ ಭಾರತದ ರಾಯಭಾರಿ ಅಧಿಕಾರಿಗಳನ್ನು ಮೃತ ವಿದ್ಯಾರ್ಥಿಯ ತಂದೆ ದೂಷಿಸಿದ್ದಾರೆ.

ಖಾರ್ಕಿವ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರೂ ರಾಯಭಾರಿ ಅಧಿಕಾರಿಗಳು ಸಹಾಯಕ್ಕೆ ಬರಲಿಲ್ಲ ಎಂದು ಮೃತ ವಿದ್ಯಾರ್ಥಿಯ ತಂದೆ ಜ್ಞಾನಗೌಡರ ಹೇಳಿದ್ದಾರೆ.

ನವೀನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಾವೇರಿ ಜಿಲ್ಲೆ ಚಳ್ಳಗೇರಿಯಲ್ಲಿರುವ ಆತನ ನಿವಾಸಕ್ಕೆ ಅಪಾರ ಪ್ರಮಾಣದಲ್ಲಿ ಜನರು ಆಗಮಿಸುತ್ತಿದ್ದು, ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ.

ದಿನಕ್ಕೆ ಎರಡು ಅಥವಾ ಮೂರು ಸಲ ನವೀನ ತಮಗೆ ಫೋನ್ ಮಾಡುತ್ತಿದ್ದ. ಇಂದು ಬೆಳಿಗ್ಗೆ ಕೂಡಾ ಫೋನ್ ಮಾಡಿದ್ದ ಎಂದು ಜ್ಞಾನಗೌಡರು ತಿಳಿಸಿದ್ದಾರೆ.

ಖಾರ್ಕಿವ್ ವೈದ್ಯಕೀಯ ಕಾಲೇಜಿನಲ್ಲಿ ನವೀನ್ ನಾಲ್ಕನೇ ವರ್ಷದ ವೈದ್ಯಕೀಯ ಕೋರ್ಸ ಮಾಡುತ್ತಿದ್ದಾಗಿ ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ರಷ್ಯಾ ದಾಳಿ ಮಾಡಿದ್ದಾಗ ನವೀನ ಮತ್ತಿತರ ಕರ್ನಾಟಕದ ವಿದ್ಯಾರ್ಥಿಗಳು ಖಾರ್ಕಿವ್ ನಲ್ಲಿ ಬಂಕರ್ ವೊಂದರಲ್ಲಿ ಸಿಲುಕಿದ್ದರು. ಇಂದು ಬೆಳಗ್ಗೆ ಫೋನ್ ಮಾಡಿದ್ದ ನವೀನ, ಬಂಕರ್ ನಲ್ಲಿ ಆಹಾರ, ನೀರು ಸಿಗುತಿಲ್ಲ ಎಂದು ಹೇಳಿದ್ದಾಗಿ ಎಂದು ಉಜ್ಜನಗೌಡ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಞಾನಗೌಡರ ಅವರಿಗೆ ಫೋನ್ ಮಾಡಿದ್ದು, ನವೀನ ಸಾವಿಗೆ ದು: ಖ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಭಾರತಕ್ಕೆ ವಾಪಸ್ ತರಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

You might also like
Leave a comment