This is the title of the web page

ಬೆಳಗಾವಿಯ ಎರಡು ವಿವಿಗಳ ಘಟಿಕೋತ್ಸವಗಳಲ್ಲಿ ಭಾಗವಹಿಸಲಿರುವ ರಾಜ್ಯಪಾಲರು

ಬೆಳಗಾವಿ, 8- ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹಲೊಟ್ ಅವರು ಮೂರು ದಿನಗಳ ಭೇಟಿಗಾಗಿ ಮಂಗಳವಾರ ಬೆಳಗಾವಿಗೆ ಆಗಮಿಸಿದ್ದು ಇಲ್ಲಿನ ಎರಡು ವಿಶ್ವವಿದ್ಯಾಲಯಗಳ ಘಟೊಕೋತ್ಸವಗಳಲ್ಲಿ ಭಾಗವಹಿಸುವರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಪೊಲೀಸ್ ಕಮಿಷನರ್ ಬೋರಲಿಂಗಯ್ಯ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಇತರ ಹಿರಿಯ ಅಧಿಕಾರಿಗಳು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದರು.

ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಬುಧವಾರ ಮುಂಜಾನೆ 11.30ಕ್ಕೆ ಸುವರ್ಣ ವಿಧಾನಸೌಧದಲ್ಲಿ ಏರ್ಪಡಿಸಲಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಒಂಭತ್ತನೆಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು.

ಮರುದಿನ ಗುರುವಾರ ಮುಂಜಾನೆ 11.30ಕ್ಕೆ ಅವರು ವಿಶ್ವೇಶ್ವರಯ್ಯ ಅಭಿಯಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು.

You might also like
Leave a comment