This is the title of the web page

ಹಿಜಾಬ್ : ಹೈಕೋರ್ಟ ಮಧ್ಯಂತರ ತಡೆ ಆದೇಶ ಪ್ರಶ್ನಿಸಿ ಸುಪ್ರೀಮ ಕೋರ್ಟಗೆ ಅರ್ಜಿ

ಹೊಸದಿಲ್ಲಿ, 11- ಕರ್ನಾಟಕ ಹೈಕೋರ್ಟ ಮೌಖಿಕವಾಗಿ ನೀಡಿರುವ ಹಿಜಾಬ್ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯೊಬ್ಬರು ಸುಪ್ರೀಮ ಕೋರ್ಟ ಮೆಟ್ಟಿಲೇರಿದ್ದಾರೆ.

ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸುವುದನ್ನು ಮೌಖಿಕವಾಗಿ ನಿಷೇಧಿಸಿರುವ ಕರ್ನಾಟಕ ಹೈಕೋರ್ಟ ಸೂಚನೆಯನ್ನು ಪ್ರಶ್ನಿಸಿ ಸುಪ್ರೀಮ ಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ.

“ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯಬಹುದು. ಆದರೆ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ವಿಚಾರಣೆ ಮುಗಿಯುವವರೆಗೂ ಧರಿಸುವಂತಿಲ್ಲ,” ಎಂಬ ಕರ್ನಾಟಕ ಹೈಕೋರ್ಟ್ ಸೂಚನೆಯು ಭಾರತೀಯ ಸಂವಿಧಾನದ 14, 15, 19, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಮ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

“ಮಧ್ಯಂತರ ಆದೇಶವು ವ್ಯಕ್ತಿಗಳ, ವಿಶೇಷವಾಗಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಆತ್ಮಸಾಕ್ಷಿಯ ಆಯ್ಕೆಯನ್ನು ಪ್ರಶ್ನಿಸಿದೆ” ಎಂದು ವಿದ್ಯಾರ್ಥಿಯೊಬ್ಬರು ವಿಶೇಷ ಅರ್ಜಿಯನ್ನು ಸಲ್ಲಿಸಿದ್ದಾರೆ.

ಗುರುವಾರ ಕರ್ನಾಟಕ ಹೈಕೋರ್ಟ ಪೂರ್ಣ ಪೀಠವು ಹಿಜಾಬ್ ನಿಷೇಧ ಪ್ರಕರಣವನ್ನು ಆಲಿಸಿ, ವಿಷಯ ಬಾಕಿ ಉಳಿದಿರುವವರೆಗೂ ಶಾಂತಿಯನ್ನು ಕಾಪಾಡಲು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸಲು ಅವಕಾಶವಿಲ್ಲ ಎಂದು ಹೇಳಿದ್ದು ಫೆಬ್ರವರಿ 14ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಮುಖ್ಯ ನ್ಯಾಯಾಧೀಶರು ಮಧ್ಯಂತರ ಆದೇಶವನ್ನು ನೀಡುತ್ತಿದ್ದಂತೆ, ಮುಸ್ಲಿಂ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲರು ಈ ಮಧ್ಯಂತರ ಆದೇಶವು ಹಕ್ಕುಗಳನ್ನು ಅಮಾನತುಗೊಳಿಸುತ್ತದೆ ಎಂದು ವಾದಿಸಿದರು. “ಆಹಾರ ಮತ್ತು ನೀರಿನ ನಡುವೆ ಆಯ್ಕೆ ಮಾಡಲು ನಮಗೆ ತಿಳಿಸಲಾಗಿದೆ. ಎರಡೂ ಅತ್ಯಗತ್ಯ,” ಎಂದು ವಕೀಲರು ಹೇಳಿದರು.

ಪೀಠದಲ್ಲಿ ರಾಜ್ಯ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ರಿತುರಾಜ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ ಅವರುಗಳು ವಿಚಾರಣೆಯನ್ನು ಗುರುವಾರ ನಡೆಸಿದ್ದರು.

ಅರ್ಜಿದಾರ ವಿದ್ಯಾರ್ಥಿಯರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಸಂಜಯ ಹೆಗ್ಡೆ ಮತ್ತು ದೇವದತ್‌ ಕಾಮತ‌ ಅವರು “ಮಧ್ಯಂತರ ಆದೇಶ” ನೀಡುವಂತೆ ನ್ಯಾಯಾಲಯವನ್ನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ ಮೌಖಿಕವಾಗಿ ಹೇಳಿಕೆ ನೀಡಿತ್ತು.

You might also like
Leave a comment