This is the title of the web page

ಆದರ್ಶ ನಿವೃತ್ತ ಶಿಕ್ಷಕ ಎಸ್ ಟಿ ದಳವಾಯಿ ನಿಧನ

ಗೋಕಾಕ, 6- ಆದರ್ಶ ಶಿಕ್ಷಕ, ಗೋಕಾಕ ಸರ್ಕಾರಿ ನ್ಯೂ ಸೆಕೆಂಡರಿ ಸ್ಕೂಲ್ ನ ನಿವೃತ್ತ ಮುಖ್ಯೋಧ್ಯಾಪಕರಾದ  ಸಾತಪ್ಪ ತಿಪ್ಪಣ್ಣ ದಳವಾಯಿ ಅವರು ಬೆಳಿಗ್ಗೆ 6 ಗಂಟೆಗೆ ಗೋಕಾಕದಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಗೋಕಾಕ ಜಿಎನ್ಎಸ್ ಶಾಲೆಯಲ್ಲಿ ಅಧ್ಯಾಪಕರಾಗಿ ಮತ್ತು ಮುಖ್ಯಾಧ್ಯಾಪಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ದಿವಂತರು ಮುಖ್ಯಾಧ್ಯಾಪಕರಾದಾಗ ಜಿಎನ್ಎಸ್ ಶಾಲೆಯು ಗೋಕಾಕದಲ್ಲಿ ನಂ. 1 ಶಾಲೆ ಎಂದು ಹೆಸರು ಗಳಿಸಿತ್ತು.

ದಿವಂಗತರ ಶಿಷ್ಯರು ದೇಶ, ವಿದೇಶಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು ಇದಕ್ಕೆಲ್ಲ ದಿವಂಗತರ ನಿಸ್ವಾರ್ಥ ಪ್ರಾಮಾಣಿಕ ಸೇವೆ ಮತ್ತು ಅವಿರತ ಶ್ರಮ ಕಾರಣ ಎಂದು ಕೆಲವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಗೋಕಾಕದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ.

You might also like
Leave a comment