This is the title of the web page

ಮತ್ತಿನ ಗಮ್ಮತ್ತು; ಮೇಕೆಯ ಬದಲು ವ್ಯಕ್ತಿಯ ಕುತ್ತಿಗೆ ಕತ್ತರಿಸಿದ ಭೂಪ

ಅಮರಾವತಿ (ಆಂಧ್ರಪ್ರದೇಶ), 18- ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಬಲಿಕೊಡಬೇಕಿದ್ದ ಮೇಕೆಯ ಬದಲು ಅದನ್ನು ಹಿಡಿದು ನಿಂತಿದ್ದ ವ್ಯಕ್ತಿಯ ಕುತ್ತಿಗೆ ಕತ್ತರಿಸಿದ ಘಟನೆ ರವಿವಾರ ಸಂಕ್ರಾಂತಿ ಆಚರಣೆ ವೇಳೆ ನಡೆದಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಮದ್ಯದ ಅಮಲಿನಲಿದ್ದ ಚಲಪತಿ ಎಂಬಾತ ಮೇಕೆಯನ್ನು ಕಡಿಯುವ ಬದಲು ಅದನ್ನು ಹಿಡಿದು ನಿಂತಿದ್ದ ಸುರೇಶ ಎಂಬವರ ಕುತ್ತಿಗೆಯನ್ನು ಚಾಕುನಿಂದ ಕತ್ತರಿಸಿದ್ದಾನೆ. ತೀವ್ರವಾಗಿ ಗಾಯಗೊಂಡ 35 ವರುಷದ ಸುರೇಶನನ್ನು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.

ಮದನಪಲ್ಲಿ ಗ್ರಾಮಾಂತರ ಮಂಡಲದ ವಲಸಪಲ್ಲಿಯಲ್ಲಿ ಸಂಪ್ರದಾಯದ ಅಂಗವಾಗಿ ಜನರ ಗುಂಪೊಂದು ಪ್ರಾಣಿ ಬಲಿ ಕೊಡುತ್ತಿದ್ದಾಗ ಈ ಘಟನೆ ನಡೆದಿದೆ.

ಗ್ರಾಮದ ಜನರು ಪ್ರತಿ ವರ್ಷ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿ ನೀಡಿ ಸ್ಥಳೀಯ ಯಲ್ಲಮ್ಮ ದೇವಸ್ಥಾನದಲ್ಲಿ ಅರ್ಪಿಸುತ್ತಾರೆ.

ಪಾನಮತ್ತನಾಗಿದ್ದ ಚಲಪತಿ ಎಂಬಾತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

You might also like
Leave a comment