This is the title of the web page

ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ ಉದ್ಯಮಿಯ ಹತ್ಯೆ

 

ಬೆಳಗಾವಿ, ೧೫- ರಿಯಲ್ ಎಸ್ಟೇಟ್ ಉದ್ಯಮಿ ರಾಜು ಮಲ್ಲಪ್ಪ ದೊಡ್ಡನ್ನವರ ಎಂಬವರನ್ನು ಭವಾನಿ ನಗರದ ಅವರ ಮನೆಯ ಸಮೀಪ ಇಂದು ಬೆಳಿಗ್ಗೆ ಹತ್ಯೆ ಮಾಡಲಾಗಿದೆ.

ಅವರಿಗಾಗಿಯೇ ಕಾಯುತ್ತಿದ್ದ ಹಂತಕರು ಅವರು ತಮ್ಮ ಕಾರ್ ಬಳಿ ಬರುತ್ತಿದಂತೆಯೇ ಖಾರದ ಪುಡಿ ಅವರ ಮುಖದ ಮೇಲೆ ಎರಚಿ ನಂತರ ಮಾರಕಾಸ್ತ್ರದಿಂದ ಕೊಚ್ಚಿ ಪರಾರಿಯಾಗಿದ್ದಾರೆ.

ರಾಜು ಅವರ ಚಲನವಲನದ ಮೇಲೆ ಗಮನವಿಟ್ಟಿದ್ದ ಹಂತಕರು ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಪತ್ನಿಯನ್ನು ನೋಡಲು ಹೋಗುವದನ್ನು ಅರಿತು ಅವರಿಗಾಗಿ ಅವರ ಮನೆಯ ಬಳಿ ಅಡಗಿ ಕಾಯುತ್ತಿದ್ದರು. ಮುಂಜಾನೆ ಸುಮಾರು ಆರು ಗಂಟೆಗೆ ಅವರು ಹೊರಗೆ ಬರುತ್ತಿದಂತೆ ಅವರ ಕೊಲೆ ಮಾಡಲಾಗಿದೆ.

40 ವರ್ಷದ ರಾಜು ಮೂಲತಃ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದವರು, ಆದರೆ ತಮ್ಮ ಕೆಲಸಕ್ಕೆ ಅನುಕೂಲವಾಗಲೆಂದು ಭವಾನಿ ನಗರದಲ್ಲಿ ವಾಸವಾಗಿದ್ದರು. ಇತೀಚಿಗೆ ಆರ್ಥಿಕ ವಿಷಯವಾಗಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಹತ್ಯೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You might also like
Leave a comment