ಬೆಳಗಾವಿ : “ಹಲೋ, ನಾ ಗೋಕಾಕ ಎಮ್ಮೆಲ್ಲೆ ರಮೇಶ ಜಾರಕಿಹೊಳಿ” ಎಂದು ಪೊಲೀಸರಿಗೆ ಧಮ್ಕಿ ಕೊಟ್ಟಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಅರಭಾವಿಯ ಸುನೀಲ ದಾಸರ್ ಬಂಧಿತ ವ್ಯಕ್ತಿ. ಈತ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸಂದರು, ಮುಖ್ಯಮಂತ್ರಿಗಳ ಹೆಸರನ್ನು ಸಹ ಬಳಸಿಕೊಂಡು ಪೊಲೀಸರಿಗೆ ಪೋನ್ ಮಾಡಿ ಬೆದರಿಕೆ ಹಾಕುತ್ತಿದ್ದ. “ನಾನು ಹೇಳಿದಂತೆ ಮಾಡದಿದ್ದಲ್ಲಿ ನಿಮ್ಮನ್ನೆಲ್ಲ ಎತ್ತಂಗಡಿ ಮಾಡಿಸುತ್ತೇನೆ”ಎಂದು ಹೆದರಿಸುತ್ತಿದ್ದ ಎಂದು ಹೇಳಲಾಗಿದೆ.
ಈತ 2019ರಲ್ಲಿ ಲೋಕಸಭಾ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಂದು ಗೊತ್ತಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ, ಈತನ ತಾಯಿ ವಿರುದ್ಧ 2 ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ಆತ ಈ ರೀತಿ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಇನ್ನೂ ಯಾರಿಗಾದರೂ ಈತ ಬೆದರಿಕೆ ಹಾಕದ್ದನೋ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾರಾದರೂ ದೌರ್ಜನ್ಯಕ್ಕೊಳಗಾಗಿದ್ದರೆ ದೂರು ನೀಡಿ ಎಂದು ಎಸ್ ಪಿ ಭೀಮಾ ಶಂಕರ ಗುಳೇದ ಕೋರಿದ್ದಾರೆ.