This is the title of the web page

ಕರ್ನಾಟಕ ಜನತೆ ಬೇರೆ ರಾಜ್ಯಕ್ಕೆ ಹೋದ್ರು ರೇಶನ್ ಸಿಗುತ್ತೆ : ಪ್ರಧಾನಿ ಮೋದಿ

 

 

ಮೈಸೂರು: ಎರಡು ದಿನ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಬೆಂಗಳೂರು ನಂತರ ಮೈಸೂರನಲ್ಲಿ ಉಪಸ್ಥಿತರಿದ್ದರು. ಮೈಸೂರಿನಲ್ಲಿಯೂ ಕೂಡ ಹಲವು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ, ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದು ಕನ್ನಡದಲ್ಲಿಯೇ ಹೇಳಿದರು.

ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಿದ ಅವರು, ಮೈಸೂರು ಸಾಂಸ್ಕೃತಿಕ ನಗರ, ಐತಿಹಾಸಿಕ ನಗರವಾಗಿದ್ದು, ಅಂತರರಾಷ್ಟ್ರೀಯ ಯೋಗ ದಿವಸದ ಉತ್ಸವ ಮೈಸೂರಿನಲ್ಲಿ ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರಕವಿ ಕುವೆಂಪು ಅನೇಕ ಮಹನೀಯರ ಊರು ಮೈಸೂರು. ಭಾರತದ ವಿಕಾಸಕ್ಕೆ ಮೈಸೂರು ಕೊಡುಗೆ ಅಪಾರ ಎಂದರು.

ಫಲಾನುಭವಿ ರೈತರ ಅನುಭವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಅವಕಾಶ ಸಿಕ್ಕಿದೆ. ಯಾರಿಗೆ ಕೇಳಲು, ಮಾತನಾಡಲು ಬರುವುದಿಲ್ಲವೋ ಅವರಿಗೆ ಚಿಕಿತ್ಸೆ ನೀಡುವ ಕೇಂದ್ರ ಇಂದು ಉದ್ಘಾಟನೆಯಾಗಿದೆ. ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು ಖುಷಿ ತಂದಿದೆ ಎಂದರು.

ಮುಂದುವರಿದು ಮಾತನಾಡಿ ಯೋಜನೆಗಳನ್ನು ಜನರಿಗೆ ತಲುಪಿಸಲು ನಾವು ಮಿಷನ್ ರೀತಿ ನಾವು ಕೆಲಸ ಮಾಡಿದೆವು. ಎಂಟು ವರ್ಷದಲ್ಲಿ ಬಡವರ ಕಲ್ಯಾಣ ಯೋಜನೆಗಳು ವ್ಯಾಪಕವಾಗಿ ವಿಸ್ತಾರಗೊಂಡಿದೆ.

2014ರಲ್ಲಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಒನ್ ನೇಷನ್ ಒನ್ ರೇಷನ್ ಯೋಜನೆ ದೇಶದಲ್ಲಿ ಜಾರಿಯಾಗಿದೆ. ಒಂದು ರಾಜ್ಯಕ್ಕೆ ಸೀಮಿತವಾಗಿದ್ದ ಯೋಜನೆಗಳನ್ನು ದೇಶದಲ್ಲಿ ವಿಸ್ತರಿಸಲಾಗಿದೆ. ಕರ್ನಾಟಕದ ನಾಗರಿಕ ಬೇರೆ ರಾಜ್ಯಕ್ಕೆ ಹೋದರೂ ಪಡಿತರ ಸಿಗುತ್ತಿದೆ ಎಂದರು.

You might also like
Leave a comment