This is the title of the web page

ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಇದ್ದವು 2 ಕೋಟಿ ರೂ.

ಕಾರವಾರ, ೯- ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡಿ ಸಿಕ್ಕಿ ಬಿದ್ದಿರುವವರ ಸುದ್ದಿಗಳನ್ನು ಆಗಾಗ ಕೇಳುತ್ತ್ತೇತಿರುತ್ತೇವೆ. ಆದರೆ ಮುಂಬೈನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬಳಿಯಲ್ಲಿ ಎರಡು ಕೋಟಿ ರೂಪಾಯಿ ಇದ್ದರೂ ಸಹ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸಿ ಸಿಕ್ಕಿಬಿದ್ದಿದ್ದಾನೆ.

ಆ ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಮನೋಹರ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಎಂಬುವವರು ಮಂಗಳೂರು ಎಕ್ಸಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದರು. ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ ಅವರಿಗೆ ದಂಡ ಸಹ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಅನುಮಾನಗೊಂಡ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ ಅವರ ಬಳಿಯಿದ್ದ ಬ್ಯಾಗ್‌ನಲ್ಲಿ 100 ಬಂಡಲ್‍ನ ಎರಡು ಕೋಟಿ ರೂಪಾಯಿ ಪತ್ತೆಯಾಗಿವೆ.

ಮನೋಹರ ಸಿಂಗ್ ಮುಂಬೈನ ಭರತ ಬಾಯ್ ಅಲಿಯಾಸ್ ಪಿಂಟೊ ಎಂಬುವರ ಬಳಿ 15 ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದು ಮನೋಹರ ಸಿಂಗ್ ತನ್ನ ಮಾಲೀಕನಿಂದ ಬ್ಯಾಗ್ ಪಡೆದು ಮಂಗಳೂರಿನಲ್ಲಿ ರಾಜು ಎಂಬವರಿಗೆ ತಲುಪಿಸಲು ಮುಂಬೈನಿಂದ ಮಂಗಳೂರಿಗೆ ಹೊರಟಿದ್ದನು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

You might also like
Leave a comment