This is the title of the web page

ನಾಡದೊರೆ ಭೇಟಿ; ಆಮೆಗತಿಗೆ ಬಂತು ಚಿರತೆಯ ವೇಗ

ವಿಜಯಪುರ, 24- ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ಜಿಲ್ಲಾ ಪ್ರವಾಸ ಮಾಡಲಿದ್ದು ವಿಜಯಪುರ ನಗರದಲ್ಲಿ ಕುಂಠಿತಗೊಂಡಿದ್ದ ಮತ್ತು ಆಮೆಗತಿಯಿಂದ ಸಾಗಿದ್ದ ರಸ್ತೆ ಕಾಮಗಾರಿಗಳು ತೀವ್ರ ಗತಿ ಪಡೆದುಕೊಂಡಿವೆ.

ವಿಜಯಪುರ ನಗರದ ಅಥಣಿ ರಸ್ತೆಯ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿತ್ತು.‌ ಮುಖ್ಯಮಂತ್ರಿ ಬೊಮ್ಮಾಯಿ ಬರುತ್ತಿದ್ದಾರೆ ಎಂದೊಡನೆ ಜಿಲ್ಲಾಡಳಿತ ರಸ್ತೆ ಕಾಮಗಾರಿಯನ್ನು ತೀವ್ರ ಗತಿಯಲ್ಲಿ ನಡೆಸತೊಡಗಿದೆ.

ಅವರು ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಬೊಮ್ಮಾಯಿ ಅವರು ಬೆಳಿಗ್ಗೆ 10.30ಕ್ಕೆ ಹೆಲಿಕಾಪ್ಟರ್ ಮೂಲಕ ಸೈನಿಕ ಸ್ಕೂಲ್ ಹೆಲಿಪ್ಯಾಡ್‌ಗೆ ಬಂದಿಳಿದು 11 ಗಂಟೆಗೆ ಗಾಂಧಿ ವೃತ್ತದ ಬಳಿಯ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಗೆ ಮಾಲಾರ್ಪನೆ ಮಾಡಲಿದ್ದಾರೆ. ಬಳಿಕ 11.30ಕ್ಕೆ ಜಿಲ್ಲಾ ಪಂಚಾಯತ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಂಡು ವಿಜಯಪುರ ನಗರ, ಬಬಲೇಶ್ವರ, ಸಿಂದಗಿ, ನಾಗಠಾಣ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ವಿಜಯಪುರ ಜಿಲ್ಲಾ ಕಚೇರಿಗಳ ಸಂಕೀರ್ಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಅವರು ಹೆಲಿಕಾಪ್ಟರ್ ಮೂಲಕ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ತೆರಳಲಿದ್ದಾರೆ.

You might also like
Leave a comment