This is the title of the web page

ಲತಾ ಮಂಗೇಶಕರ ಸ್ಥಿತಿ ಚಿಂತಾಜನಕ

ಮುಂಬೈ, 5- ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ ಅವರ ಆರೋಗ್ಯ ಶನಿವಾರ ಮತ್ತೆ ಹದಗೆಟ್ಟಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

“ಮಂಗೇಶ್ಕರ ಅವರು ವೆಂಟಿಲೇಟರ್ ಮೇಲಿದ್ದಾರೆ” ಎಂದು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ ಸಮ್ದಾನಿ ಹೇಳಿದ್ದಾರೆ. 92 ವರ್ಷದ ಗಾಯಕಿ ಈಗ ತೀವ್ರ ನಿಗಾ ಘಟಕದಲ್ಲಿ ಉಳಿದಿದ್ದಾರೆ.

ನ್ಯುಮೋನಿಯಾ ಮತ್ತು ಕೋವಿಡ್  ರೋಗದ ಕಾರಣ ಲತಾ ಮಂಗೇಶಕರ ಅವರನ್ನು ಜನವರಿ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಎರಡೂ ಕಾಯಿಲೆಗಳಿಂದ ಚೇತರಿಸಿಕೊಂಡಿದ್ದರೂ ಇಷ್ಟು ದಿನ ಆಸ್ಪತ್ರೆಯಲ್ಲಿಯೇ ಇದ್ದರು.

You might also like
Leave a comment