Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಪಟಾಕಿ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಮ ಕೋರ್ಟ 


ಹೊಸದಿಲ್ಲಿ : ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವನ್ನು ಪ್ರಶ್ನಿಸಿ ಸುಪ್ರೀಮ ಕೋರ್ಟನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ತುರ್ತು ವಿಚಾರಣೆಗಾಗಿ ಕೋರಲಾಗಿದ್ದು, ಸುಪ್ರೀಮ ಕೋರ್ಟ ಅದನ್ನು ವಜಾಗೊಳಿಸಿದೆ.

ಜನರು ಶುದ್ಧ ಮತ್ತು ತೆರೆದ ಗಾಳಿಯನ್ನು ಉಸಿರಾಡಲಿ ಮತ್ತು ತಮ್ಮ ಸ್ವಂತ ಹಣದಿಂದ ಸಿಹಿ ತಿಂಡಿ ಖರೀದಿಸಲಿ ಎಂದಿದೆ.

ದೆಹಲಿಯಲ್ಲಿ ಪಟಾಕಿಗಳನ್ನ ಖರೀದಿಸಲು ಮತ್ತು ಮಾರಾಟ ಮಾಡಲು ಸಹ ನಿಷೇಧವಿದೆ. ಇದನ್ನು ಉಲ್ಲಂಘಿಸಿದರೆ 200 ರೂ.ಗಳ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಸುಪ್ರೀಮ ಕೋರ್ಟ ಈ ಬೇಡಿಕೆಯನ್ನು ತಿರಸ್ಕರಿಸುವ ಮೊದಲು, ಗುರುವಾರ, ದೆಹಲಿ ಹೈಕೋರ್ಟ ಸಹ ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಆಲಿಸಲು ನಿರಾಕರಿಸಿತು.

ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ನೀಡಿದ ನಿರ್ಧಾರವನ್ನು ದೆಹಲಿ ಹೈಕೋರ್ಟಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ದೆಹಲಿ ಹೈಕೋರ್ಟ, ಈ ವಿಷಯವು ಇನ್ನೂ ಸುಪ್ರೀಮ ಕೋರ್ಟನಲ್ಲಿ ನ್ಯಾಯಾಂಗದ ಅಡಿಯಲ್ಲಿದೆ ಮತ್ತು ಆದ್ದರಿಂದ ಅದನ್ನು ಆಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ.


A B Dharwadkar
the authorA B Dharwadkar

Leave a Reply