This is the title of the web page

ಬೆಳಗಾವಿಯಲ್ಲಿ ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ

ಬೆಳಗಾವಿ, 18- ಬೆಂಗಳೂರಿನ ಶಿವಾಜಿ ನಗರದಲ್ಲಿ ಶಿವಾಜಿ ಮೂರ್ತಿಗೆ ಕಪ್ಪು ಮಸಿ ಬಳಿದ ಪ್ರಕರಣದ ನಂತರ ಬೆಳಗಾವಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಕೆಡವಿದ ಘಟನೆ ತಡರಾತ್ರಿ ನಡೆದಿದೆ.

ಬೆಳಗಾವಿಯಲ್ಲಿ ಕೆಲ ಪುಂಡರು ರಾಯಣ್ಣ ಮೂರ್ತಿ ಕೆಡವಿ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಅನಗೋಳದ ಕನಕದಾಸ ಕಾಲೋನಿಯಲ್ಲಿ ಬೆಳಗಿನ ಜಾವ ಕೃತ್ಯ ಎಸಗಿದ್ದಾರೆ‌. ಅಷ್ಟೇ ಅಲ್ಲದೇ ಮೂರ್ತಿ ಹಾನಿಗೊಳಿಸಿ, ಖಡ್ಗ, ಗುರಾಣಿ ಬೇರೆ ಬೇರೆ ಸ್ಥಳದಲ್ಲಿ ಇಟ್ಟು ಅಗೌರವ ತೋರಿದ್ದಾರೆ‌. ಸ್ಥಳದಲ್ಲಿ ಟಿಳಕವಾಡಿ ಪೊಲೀಸರು ಈಗ ಬೀಡುಬಿಟ್ಟಿದ್ದಾರೆ.

ಬೆಂಗಳೂರಿನ ಘಟನೆಗೆ ಪ್ರತಿಯಾಗಿ ಮಧ್ಯರಾತ್ರಿ ಬೋಗಾರವೇಸ ಸರ್ಕಲ್ ನಲ್ಲಿ ಜಮಾವಣೆಗೊಂಡ ನೂರಾರು ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸ್ ಜೀಪ್ ಸೇರಿದಂತೆ ಸುಮಾರು 20 ವಾಹನಗಳು ಹಾನಿಯಾಗಿವೆ.

ಇದೇ ಸಂಧರ್ಭದಲ್ಲಿ ಅನಗೋಳನ ಕನಕದಾಸ ವೃತ್ತದಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಗೊಳಿಸಲಾಯಿತು. ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 27 ಜನರನ್ನು ವಶಕ್ಕೆ ಪಡೆಯಲಾಗಿದೆ.

You might also like
Leave a comment