This is the title of the web page

ಡಿಸಿಸಿ ಬ್ಯಾಂಕ್ ತಿಜೋರಿ, ಲಾಕರ್ ದೋಚಿದ ಕಳ್ಳರು

ಬೆಳಗಾವಿ, 6- ಅತೀ ದೊಡ್ಡ ಬ್ಯಾಂಕ್ ಕಳ್ಳತನವೊಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆಯವರೆಗೆ ಸಂಭವಿಸಿದೆ.

ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ನ ಮುರಗೋಡ ಶಾಖೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು, ಡುಪ್ಲಿಕೇಟ್ ಚಾವಿಗಳನ್ನು ಬಳಸಿ ತಿಜೋರಿ ಹಾಗು ಲಾಕರಗಳನ್ನು ತೆರೆದು ನಾಲ್ಕು ಕೋಟಿ ನಗದು ಹಾಗು 1.5 ಕೋಟಿ ಮೌಲ್ಯದ ಚಿನ್ನಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಬ್ಯಾಂಕಿನ ಬಾಗಿಲು ತೆರೆದಿರುವದನ್ನು ಕಂಡ ಜನ ಪೊಲೀಸರಿಗೆ ತಿಳಿಸಿದಾಗ ಕಳ್ಳತನದ ಕುರಿತು ಗೊತ್ತಾಗಿದೆ.

You might also like
Leave a comment