This is the title of the web page

ಅಪ್ಪಳಿಸಿತು ಮೂರನೇ ಅಲೆ; 2479 ಜನರಿಗೆ ಕೊರೋನಾ

ಬೆಂಗಳೂರು, 4- ಕೆಲ ದಿನಗಳಿಂದ ಮಂದಗತಿಯಲ್ಲಿ ಏರಿಕೆ ಕಂಡಿದ್ದ ಕೊರೋನಾ ಮೂರನೇ ಅಲೆ ರಾಜ್ಯಕ್ಕೆ ಸೋಮವಾರ ತೀವ್ರವಾಗಿ ಅಪ್ಪಳಿಸಿದಂತಾಗಿದ್ದು ನಿನ್ನೆ ಮುಂಜಾನೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ 2479 ಜನರಲ್ಲಿ ಸೋಂಕು ದೃಢಪಟ್ಟಿದೆ ಹಾಗು ನಾಲ್ವರು ಅಸು ನೀಗಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು, ಬೆಂಗಳೂರಿನಲ್ಲಿ 2053 ಸೇರಿದಂತೆ ರಾಜ್ಯಾದ್ಯಂತ 2479 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ದಿಢೀರ್ ಶೇ.2.59ಕ್ಕೆ ಏರಿಕೆಯಾಗಿದೆ. ಇಂದು ಕೊರೋನಾ ಸೋಂಕಿತರಾದ ನಾಲ್ವರು ಸಾವನ್ನಪ್ಪಿದ್ದಾರೆ. 95,391 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ 2479 ಜನರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ

You might also like
Leave a comment