This is the title of the web page

ಯುವತಿ ನಾಪತ್ತೆ

ಧಾರವಾಡ ಮಾ.9- ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವತಿಯೊಬ್ಬಳು ಮರಳಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಮಾಧವ ನಗರ ನಿವಾಸಿ 19 ವರ್ಷದ ಮಾಸಾಬಿ ಅಬ್ದುಲ್‍ಖಾದರ ಪೀರಜಾದೆ (19) ಎಂಬಾಕೆ ಮಾ. 7ರಂದು ನಾಪತ್ತೆಯಾಗಿದ್ದಾಳೆಂದು ಅವಳ ತಾಯಿ ಪರವೀನಬಾನು ಪೀರಜಾದೆ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದ್ವಿತೀಯ ಪಿಯುಸಿ ಓದಿರುವ ಮಾಸಾಬಿ ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ. ಯುವತಿ ಗೋದಿ ಮೈಬಣ್ಣ ಹೊಂದಿದ್ದಾಳೆ. 5 ಅಡಿ ಎತ್ತರವಿದ್ದು, ದುಂಡು ಮುಖ, ದಪ್ಪ ಮೈಕಟ್ಟು ಹೊಂದಿದ್ದಾಳೆ. ಮನೆಯಿಂದ ಹೋಗುವ ಸಂದರ್ಭದಲ್ಲಿ ಹಳದಿ ಹಾಗೂ ಕಪ್ಪು ಬಣ್ಣದ ಉಡುಪು ಧರಿಸಿದ್ದು ಇರುತ್ತದೆ. ನಾಪತ್ತೆಯಾದ ಯುವತಿ ಬಗ್ಗೆ ಮಾಹಿತಿ ಲಭಿಸಿದರೆ ಕೂಡಲೇ ಅಶೋಕ ನಗರ ಪೊಲೀಸ ಠಾಣೆ(0836-2233490)ಗೆ ಸಂಪರ್ಕಿಸಲು ಕೋರಲಾಗಿದೆ.

You might also like
Leave a comment