Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Entertainment News

ಹಿರಿಯ ನಟಿ ವಿನಯಪ್ರಸಾದ ಮನೆ ಕಳ್ಳತನ 


ಬೆಂಗಳೂರು: ಖ್ಯಾತ ಹಿರಿಯ ನಟಿ ವಿನಯಪ್ರಸಾದ ಮನೆಯ ಬಾಗಿಲು ಮುರಿದು ಖದೀಮರು ಬೆಡ್ ‌ರೂಮ್‌ನಲ್ಲಿರುವ 7 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ.

ವಿನಯಪ್ರಸಾದ ಮತ್ತು ಪತಿ ಜ್ಯೋತಿಪ್ರಕಾಶ ಹತ್ರಿ ಅವರು ಅಕ್ಟೋಬರ್ 22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದರು. ಅಕ್ಟೋಬರ 26ರಂದು ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ.

ಮನೆಯ ಮುಂಬಾಗಿಲಿನ ಲಾಕ್ ಮೀಟಿ ಒಳಹೊಕ್ಕ ಕಳ್ಳರು ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂ. ನಗದು ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ನಟಿ ವಿನಯ ಪ್ರಸಾದ ಅವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


A B Dharwadkar
the authorA B Dharwadkar

Leave a Reply