This is the title of the web page

ಕ್ರಿಸ್ಮಸ್, ಹೊಸ ವರ್ಷಾಚರಣೆ ಅನುಮತಿ ನಿರ್ಧಾರ ಸದ್ಯ ಇಲ್ಲ

ಶಿಗ್ಗಾವಿ (ಹಾವೇರಿ), 10- ಕೋವಿಡ್ ಹೊಸತಳಿ ಓಮಿಕ್ರಾನ್ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಅನುಮತಿ ಕೊಡುವ ಕುರಿತು ಸರಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಂದು ಶಿಗ್ಗಾಂವನಲ್ಲಿ ಮತಚಲಾವಣೆ ಮಾಡಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಹಿನ್ನಲೆ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಪಾಲಿಸಬೇಕಾದ ಯಾವುದೇ ನಿಯಮ ಸದ್ಯಕ್ಕೆ ವಿಧಿಸಿಲ್ಲ. ಆದರೆ ಸೋಂಕು ಹರಡದಂತೆ ಕೋವಿಡ್ ನಿಯಮ ಮಾತ್ರ ಎಲ್ಲರೂ ಪಾಲಿಸಲೇಬೇಕೆಂದು ತಿಳಿಸಿದರು.

ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. ಮಹದಾಯಿ ಕಾಮಗಾರಿ ಆರಂಭಿಸಲು ಏನೆಲ್ಲ ಮಾಡಬೇಕು ಅದನ್ನು ಮಾಡುತ್ತೇವೆ. ಬೆಳೆ ಹಾನಿ ಹಿನ್ನಲೆ ಪರಿಹಾರ ವಿತರಣೆ ಆರಂಭವಾಗಿದೆ. ಪರಿಹಾರ ಅನ್ನುವ ಆ್ಯಪ್ ಮೂಲಕ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

You might also like
Leave a comment