This is the title of the web page

ಭೀಕರ ಅಪಘಾತ : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವು 

 

 

ಹಾಸನ: ಭೀಕರ ಅಪಘಾತದಲ್ಲಿ ತಂದೆ-ಮಗ ಸೇರಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ನಡೆದಿದೆ.

ತಮಿಳುನಾಡು ಮೂಲದ ಅಂಜನಪ್ಪ, ಕಾರ್ತಿಕ್ ಮೃತ ದುರ್ದೈವಿಗಳು.ಕ್ಯಾಂಟರ್ ಹಾಗೂ ಮಾರುತಿ 800 ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಧರ್ಮಸ್ಥಳಕ್ಕೆ ಎರಡು ಕಾರಿನಲ್ಲಿ 10 ಜನ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಢಿಕ್ಕಿಯಾಗಿ, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

You might also like
Leave a comment