This is the title of the web page

ಬಸ್ ಅಪಘಾತ : ಮೂವರಿಗೆ ಗಾಯ

ವಿಜಯಪುರ : ಬಸ್‌ನ ಮುಖ್ಯ ಫಾಟಾ ಕಟ್ ಆಗಿ ಬೇವಿನ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಜಿಲ್ಲೆಯ ನಾಗಠಾಣ ಮತ್ತು ಅಲಿಯಾಬಾದ್ ಮಧ್ಯೆ ನಡೆದಿದೆ.

ಇಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಇಂಡಿ ಡಿಪೋದ ಬಸ್ ಫಾಟಾ ಮುರಿದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬೇವಿನ ಮರಕ್ಕೆ ಡಿಕ್ಕಿಯಾಗಿದೆ.

ಬಸ್ ನಲ್ಲಿ 70 ಜನ ಪ್ರಯಾಣಿಸುತ್ತಿದ್ದರು, ಇದರಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ‌. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment