Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಸವರ್ಣಿಯ ಮಹಿಳೆಯನ್ನು ದಿಟ್ಟಿಸಿ ನೋಡಿದ ಎಂದು ದಲಿತನ ಕುಟುಂಬದ ಮೂವರ ಹತ್ಯೆ


ಭೋಪಾಲ, 26- : ದಲಿತರೊಬ್ಬರು ಮೇಲ್ಜಾತಿಯ ಮಹಿಳೆಯನ್ನು ದಿಟ್ಟಿಸಿ ನೋಡಿದನೆಂಬ ಕ್ಷುಲ್ಲಕ ಆರೋಪದ ಮೇಲೆ ಗುಂಡು ಹಾರಿಸಿ ಆತನ ಕುಟುಂಬದ ಮೂವರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ದೇವರಾನ ಗ್ರಾಮದಲ್ಲಿ ನಡೆದಿದೆ.

ಮನಾಕ್ ಅಹಿರ‌ವಾರ ಎಂಬ ದಲಿತ ಯುವಕ ತಮ್ಮ ನೆರಮನೆಯ ಸವರ್ಣಿಯ ಜಗದೀಶ ಪಾಟೀಲ‌ ಎಂಬಾತನ ಪತ್ನಿಯನ್ನು ದಿಟ್ಟಿಸಿ ನೋಡಿದ ಎಂದು ಆರೋಪಿಸಿ ಎರಡೂ ಕುಟುಂಬಗಳ ನಡುವೆ ಸೋಮವಾರ ಜಗಳ ನಡೆದಿತ್ತು. ಗ್ರಾಮಸ್ಥರು ಬಂದು ಎರಡೂ ಕುಟುಂಬಗಳನ್ನು ಸಮಾಧಾನಪಡಿಸಿದ್ದರು.

ಆದರೆ ಮಂಗಳವಾರ ಬೆಳಿಗ್ಗೆ ಜಗದೀಶ ಪಾಟೀಲ ಮತ್ತು ಐವರು ಆರೋಪಿಗಳು ಬಂದೂಕುಗಳ ಸಹಿತ ಮನಾಕ್ ಅಹಿರ‌ವಾರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ, ಮನಾಕ್ ಅಹಿರವಾರ, ಆತನ ತಮ್ಮ ಮಹೇಶ ಅಹಿರ‌ವಾರ ಮತ್ತು ಅವರ ತಂದೆ-ತಾಯಿಗಳ ಮೇಲೆ ಗುಂಡು ಹಾರಿಸಿದ್ದಾರೆ.

ಗುಂಡೇಟಿನಿಂದ ಮನಾಕ್ ಅಹಿರ‌ವಾರ ಮತ್ತು ಅವರ ತಂದೆ, ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹೋದರ ಮಹೇಶ ಅಹಿರ‌ವಾರ‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹೇಶ ಅಹಿರ‌ವಾರ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ, ಕೊಲೆಯ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಜಗದೀಶ ಪಟೇಲ‌ನನ್ನು ಬಂಧಿಸಲಾಗಿದೆ ಮತ್ತು ನಾಪತ್ತೆಯಾಗಿರುವ ಇನ್ನೂ ಐವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ದಾಮೋಹ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತೆನಿವಾರ ಹೇಳಿದ್ದಾರೆ.

ಇನ್ನು ದಲಿತರ ಹತ್ಯೆ ವಿರೋಧಿಸಿ ದಾಮೋಹ‌ನಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಮಧ್ಯಪ್ರದೇಶ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹೋರಾಟಗಳು ನಡೆಯುತ್ತಿವೆ.

ದಾಮೋಹ್ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಈ ಘಟನೆಯನ್ನು ಕರಾಳ ಎಂದು ಕರೆದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ನಡೆದ ದೌರ್ಜನ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕಮಲ ನಾಥ ಆಗ್ರಹಿಸಿದ್ದಾರೆ.


A B Dharwadkar
the authorA B Dharwadkar

Leave a Reply