This is the title of the web page

ಇಂದು ರಾಯಣ್ಣ ಹುತಾತ್ಮ ದಿನ; 144 ಸೆಕ್ಷನ್ ಜಾರಿ

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಬೆಳಗಾವಿ, 26- ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನು ಖಾನಾಪುರ ತಾಲೂಕು ನಂದಗಡ ಗ್ರಾಮದ ಆಲದ ಮರವೊಂದಕ್ಕೆ ನೇಣು ಹಾಕಿ ಕೊಂದದ್ದು ಇದೇ ದಿನ. ಅವರ ಸಮಾಧಿ ಕೂಡ ಅಲ್ಲೇ ಇದೆ.

ರಾಯಣ್ಣ ಸಮಾಧಿಗೆ ಶ್ರದ್ಧಾಂಜಲಿ ಅರ್ಪಿಸಲು ಜನೆವರಿ 26ರಂದು ಆಸಂಖ್ಯ ಜನ ಬರುತ್ತಾರೆ. ಕೆಲ ದಿನಗಳ ಹಿಂದೆ ಬೆಳಗಾವಿಯ ಅನಗೋಳ ಪ್ರದೇಶದಲ್ಲಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ಒಡೆದು ಹಾಕಿದ ಕಾರಣ ರಾಜ್ಯದಾದ್ಯಂತ ತೀವ್ರ ಆಕ್ರೋಷ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಇಂದು ಅನೇಕ ಜನ ಅಲ್ಲಿ ತೆರಳುವ ಸಾಧ್ಯತೆ ಇರುವದರಿಂದ ಜಿಲ್ಲಾಡಳಿತ ಕೋವಿಡ್ ನಿಯಮ ಪಾಲನೆ ನೆಪದಲ್ಲಿ 144 ಕಲಂ ಅನ್ವಯ ಸಮಾಧಿ ಸ್ಥಳದ ಸುತ್ತ ಇಂದು ಮುಂಜಾನೆಯಿಂದ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಿದೆ.

ಖಾನಾಪುರ ತಹಸೀಲ್ದಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.

You might also like
Leave a comment