This is the title of the web page

ನಾಳೆ ಹಾಫ್ ಡೇ, ಶನಿವಾರ ಫುಲ್ ಡೇ

 

ಬೆಳಗಾವಿ, ೨೦- ಜೂನ್ 21 ರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ರಾಜ್ಯದ ಶಾಲೆಗಳಿಗೆ ನಾಳೆ ಮಂಗಳವಾರ ಅರ್ಧ ದಿನ ರಜೆ ನೀಡಲಾಗಿದ್ದು, ಬದಲಿಗೆ ಬರುವ ಶನಿವಾರದ ಅರ್ಧದಿನದ ರಜೆಯನ್ನು ರದ್ದುಗೊಳಿಸಿ ಪೂರ್ಣದಿನ ಶಾಲೆ ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಎಲ್ಲ ಶಾಲೆಗಳು ಮಂಗಳವಾರ ಅರ್ಧದಿನ ನಡೆಸಿ ಜೂನ್ 25 ಶನಿವಾರದಂದು ಪೂರ್ತಿ ದಿನ ತರಗತಿಗಳು ನಡೆಯಲಿವೆ. ನಾಳೆ ಶಾಲೆಯ ಮೊದಲ ಅವಧಿಯಲ್ಲಿ ಯೋಗಾಸನ ನಡೆಸಲಾಗುವುದು.

ರಾಜ್ಯದ ಎಲ್ಲ ಶಾಲೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಎಸ್ಡಿಎಂಸಿ ಮಂಡಳಗಳು, ಶಿಕ್ಷಕರು ಯೋಗ ಸಂಸ್ಥೆಗಳು ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

You might also like
Leave a comment