This is the title of the web page

ನಾಳೆ ಪ್ರೇಮಿಗಳು ಸಿಕ್ಕರೆ ಲಾಠಿ ಏಟು, ಸ್ಥಳದಲ್ಲೇ ಮದುವೆ

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಭೋಪಾಲ, 13- ದಿ.14 ರಂದು ಪ್ರೇಮಿಗಳ ದಿನ ಯಾರಾದರೂ ಪ್ರೇಮಿಗಳು ಪಾರ್ಕನಲ್ಲಿ ಕಂಡು ಬಂದರೆ ಲಾಠಿಯಿಂದ ಅವರನ್ನು ದಂಡಿಸುತ್ತೇವೆ ಎಂದು ಶಿವಸೇನಾ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿ, ಇದಕ್ಕಾಗಿ ಲಾಠಿಗಳಿಗೆ ಪೂಜೆ ಸಲ್ಲಿಸಲಾಯಿತು.

ಪ್ರೀತಿಯ ಜೋಡಿಗಳಿಗೆ ಪಾಠ ಕಲಿಸಲು ಶಿವಸೇನೆ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರೇಮಿಗಳ ದಿನವನ್ನು ಆಚರಿಸುವ ಯುವಕರಿಗೆ ಎಚ್ಚರಿಕೆ ನೀಡಿದರು.

ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕ. ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಾಗಿ ಶಿವಸೇನೆ ಹೇಳಿದೆ.

ಸೋಮವಾರ ಲಾಠಿಗಳೊಂದಿಗೆ ನಗರದ ವಿವಿಧ ಭಾಗಗಲ್ಲಿ ಸುತ್ತಲಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದು ಕಂಡು ಬಂದರೆ ಯುವಕ-ಯುವತಿಯರಿಗೆ ಸ್ಥಳದಲ್ಲೇ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಭೋಪಾಲ್‌ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್ ಗಳಿಗೂ ಸಹ ಎಚ್ಚರಿಕೆ ನೀಡಿದೆ.

ಭಜರಂಗದಳ, ಶಿವ ಸೇನಾ ಸೇರಿದಂತೆ ಹಲವು ಸಂಘಟನೆಗಳು ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವುದನ್ನು ವಿರೋಧಿಸುತ್ತಿವೆ.

You might also like
Leave a comment