Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime News

ವಿಜಯಪುರ: ಹಳಿ ತಪ್ಪಿದ ರೈಲು 


ವಿಜಯಪುರ: ಚಲಿಸುತ್ತಿದ್ದ ಗೂಡ್ಸ ರೈಲಿನ ಬೋಗಿಗಳ ಕೊಂಡಿ ಕಳಚಿ ಆರು ಬೋಗಿಗಳು ಒಂದಕೊಂದು ಢಿಕ್ಕಿ ಹೊಡೆದುಕೊಂಡಿವೆ.

ಜಿಲ್ಲೆಯ ಮುಳವಾಡ ರೈಲು ‌ನಿಲ್ದಾಣ ಬಳಿ ಘಟನೆ ನಡೆದಿದೆ. ಸೊಲ್ಲಾಪುರದಿಂದ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ರೈಲಿನ ದುರ್ಘಟನೆಯಿಂದ ರೈಲಿನ ಹಳಿ ಮುರಿದಿದ್ದು ಸರಿ ಪಡಿಸುವ ಕಾರ್ಯ ನಡೆದಿದೆ. ಸರಕು ಸಾಗಾಣಿಕೆ ರೈಲ್ವೇ ಆಗಿದ್ದುದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆಯಿಂದಾಗಿ ವಿಜಯಪುರ ಮಾರ್ಗವಾಗಿ ಸೋಲಾಪುರ, ಹುಬ್ಬಳ್ಳಿ, ಬಾಗಲಕೋಟ, ಗದಗ ಕಡೆ ತೆರಳಬೇಕಿದ್ದ ಆರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಖಂಗೊಂಡಿರುವ ಬೋಗಿಗಳನ್ನು ತೆರವುಗೊಳಿಸಲು ಬೃಹತ್ ಕ್ರೇನ್ ಗಳನ್ನು ಬಳಸಲಾಗುತ್ತಿದೆ.


A B Dharwadkar
the authorA B Dharwadkar

Leave a Reply