This is the title of the web page

ನೇಣುಬಿಗಿದ ಸ್ಥಿತಿಯಲ್ಲಿ ಎರಡು ಮೃತದೇಹ ಪತ್ತೆ

 

 

ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾದ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಹೊರವಲಯದಲ್ಲಿ ನಡೆದಿದೆ.

ಸಿದ್ದರಾಜು ಹಾಗೂ ಸುಮಿತ್ರಾ ಎಂಬುವರ ಶವ ಪತ್ತೆಯಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದರಾಜು ಮೃತದೇಹ ಪತ್ತೆಯಾದರೆ, ಮರಳಿನಲ್ಲಿ ಸುಮಿತ್ರಾ ಎಂಬುವವರ ಮೃತದೇಹ ಪತ್ತೆಯಾಗಿದೆ.

ಮೃತರು ಮೈಸೂರು ತಾಲ್ಲೂಕು ಕೆಬ್ಬೆಹುಂಡಿ ಗ್ರಾಮದವರು. ಪರಸ್ಪರ ಪರಿಚಯದವರಾಗಿದ್ದರು. ಸುಮಿತ್ರಾಗೆ ಬೇರೆಯವರ ಜೊತೆ ಮದುವೆಯಾಗಿತ್ತು. ಸಿದ್ದರಾಜು ಸಹಾ ವಿವಾಹಿತನಾಗಿದ್ದ. ಇಬ್ಬರು ತಲಕಾಡು ದೇವಸ್ಥಾನಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

You might also like
Leave a comment