This is the title of the web page

ಬೆಳಗಾವಿ ಜಿಲ್ಲೆಯಿಂದ ಇಬ್ಬರು ಗಡಿಪಾರು

ಬೆಳಗಾವಿ, 28- ಕಳೆದ ಅನೇಕ ವರುಷಗಳಿಂದ ಜೂಜಾಡಿಸುತ್ತಿದ್ದ ‘ಮಟಕಾ ಬುಕ್ಕಿ’ ಮಹೇಶ ಯಲ್ಲಪ್ಪಾ ಯಲ್ಲಾರಿ ಹಾಗೂ ನಶೆ ಏರಿಸುವ ಗಾಂಜಾ ಒಣ ತಪ್ಪಲನ್ನು ಮಾರಾಟ ಮಾಡುತ್ತಿದ್ದ ವಿಲಾಸ ಶಂಕರ ಬಾಳೇಕುಂದ್ರಿಯನ್ನು ನ್ಯಾಯಾಲಯದ ಒಪ್ಪಿಗೆಯ ಅನ್ವಯ ಬೆಳಗಾವಿ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಜಿಲ್ಲಾ ಉಪಪೋಲಿಸ್ ಆಯುಕ್ತ ಹಾಗು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ರವೀಂದ್ರ ಗಡಾದಿ ಅವರು ಗಡಿಪಾರು ಆದೇಶ ಹೊರಡಿಸಿದ್ದಾರೆ.

ಸಮಾಜಕ್ಕೆ ಮಾರಕವಾಗಿರುವ ಮಟಕಾ, ಜೂಜಾಟ, ಗಾಂಜಾ ಮಾರಾಟ ಮುಂತಾದ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

You might also like
Leave a comment