Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಹೆದ್ದಾರಿ ದಾಟುತ್ತಿದ್ದ ರೈತರು ಕಾರಿಗೆ ಬಲಿ


ಬೆಳಗಾವಿ : ಕಿತ್ತೂರು ಉತ್ಸವ ನೋಡಿಕೊಂಡು ಮರಳಿ ಹಿಂದಿರುಗುತ್ತಿದ್ದ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದ ರೈತರಿಬ್ಬರಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಅಸುನೀಗಿರುವ ದುರ್ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಖಾನಾಪುರ ತಾಲೂಕಿನ ತಮ್ಮ ಕಲಾರಕೊಪ್ಪ ಗ್ರಾಮದ ಬಾಳಪ್ಪ ತಳವಾರ( 33 ವರ್ಷ) ಮತ್ತು ಕರೆಪ್ಪ ತಳವಾರ (36 ವರ್ಷ) ಮಂಗಳವಾರ ಕಿತ್ತೂರು ಉತ್ಸವದ ಕಾರ್ಯಕ್ರಮಗಳನ್ನು ನೋಡಿ ತಮ್ಮ ಗ್ರಾಮಕ್ಕೆ ನಡೆದುಕೊಂಡು ತೆರಳಿದ್ದರು. ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ವಿದ್ಯುತ್ ದೀಪವಿರದೇ ಕತ್ತಲೆಯಾವರಿಸಿದ್ದರಿಂದ ಹೆದ್ದಾರಿ ಮೇಲೆ ತೆರಳಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.

ದುರ್ದೈವಿಗಳು ಕುಟುಂಬ ನಿರ್ವಹನೆಗೆ ಕೃಷಿ ಮತ್ತು ಇತರ ದಿನಗೂಲಿ ಕೆಲಸ ಮಾಡುತ್ತಿದ್ದರು.


A B Dharwadkar
the authorA B Dharwadkar

Leave a Reply