This is the title of the web page

ಸಿಗರೇಟ್ ವಿಚಾರಕ್ಕೆ ಇಬ್ಬರಿಗೆ ಚಾಕು ಇರಿತ

ಹುಬ್ಬಳ್ಳಿ, ೧೫-  ಸಿಗರೇಟ್ ವಿಚಾರಕ್ಕೆ ಇಬ್ಬರಿಗೆ ಚಾಕು ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ.

ಆನಂದನಗರದ ವೆಲ್‌ಕಮ್ ಹಾಲ್ ಬಳಿ ಗುಟಕಾ , ಸಿಗರೇಟ್ ವಿಷಯಕ್ಕೆ ಸ್ಥಳೀಯ ನಿವಾಸಿಗಳಾದ ಜಿಲಾನಿ ಶೇಖ ಮತ್ತು ಜಾವೀದಗೆ ನಾಲ್ವರು ಚಾಕು ಇರಿದು ಪರಾರಿಯಾಗಿದ್ದಾರೆ.

ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿರುವ ಜಿಲಾನಿ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment