Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Local News

ಕೆಪಿಟಿಸಿಎಲ್ ಅಕ್ರಮ; ಗೋಕಾಕದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ


ಗೋಕಾಕ: ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಆರೋಪಿಗಳನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ಸಂಜೀವ ಪಾಟೀಲ ತಿಳಿಸಿದ್ದಾರೆ.

ಯಲ್ಲಪ್ಪ ಮಹಾದೇವ ರಕ್ಷಿ (26) ಹಾಗೂ ನಾಗಪ್ಪ ಶಿವಪ್ಪ ದೊಡ್ಮನಿ ( 27) ಬಂಧಿತ ಆರೋಪಿಗಳು. ಬಂಧಿತ ಯಲ್ಲಪ್ಪ ಪರೀಕ್ಷೆ ಬರೆಯುವ ಅಭ್ಯರ್ಥಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿ ಶಿರಹಟ್ಟಿಯಲ್ಲಿ ಕುಳಿತು ಪ್ರಶ್ನೆ ಪತ್ರಿಕೆಗೆ ಉತ್ತರ ಹೇಳಿದ್ದಾನೆ. ಇನ್ನೋರ್ವ ಆರೋಪಿ ನಾಗಪ್ಪ ಎಲೆಕ್ಟ್ರಾನಿಕ್ ಡಿವೈಸ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದಾನೆ.

ಬಂಧಿತರಿಂದ ಒಂದು 2 ಮೊಬೈಲ್, ಒಂದು ಕಾರು ಹಾಗೂ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಷ್ಟೇ ಗೋಕಾಕ ನ್ಯಾಯಾಲಯ ಈಗಾಗಲೇ ಬಂಧಿಸಲ್ಪಟ್ಟಿದ್ದ 20 ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


Leave a Reply