This is the title of the web page

ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಬೆಳಗಾವಿ, ೨೫- ರವಿವಾರದ ರಜೆಯ ನಿಮಿತ್ಯ ಸ್ನೇಹಿತರೊಂದಿಗೆ ನದಿಗಳಿಗೆ ತೆರಳಿದ್ದ ಇಬ್ಬರು ಯುವಕರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಈಜಾಡುವಾಗ ನೀರಿನಲ್ಲಿ ಮುಳುಗಿ ಅಸು ನೀಗಿರುವ ಘಟನೆ ಸಂಭವಿಸಿವೆ.

ಮೊದಲ ಘಟನೆಯಲ್ಲಿ ಸವದತ್ತಿ ತಾಲೂಕಿನ ಬೆಳವಲಕೊಪ್ಪ ಗ್ರಾಮದ ಹೊರವಲಯದ ಮಲಪ್ರಭಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ 17 ವರ್ಷದ ಅಕ್ಷಯ ಗುರುಸಿದ್ದಪ್ಪ ಕೊಟಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ನೀರು ಆಳವಿರುವ ಸ್ಥಳವರಿಯದೇ ಈಜಾಡುತ್ತಾ ಸೆಳುವಿಗೆ ಸಿಕ್ಕ ಅಕ್ಷಯ ನೀರಿನಿಂದ ಮೇಲಕ್ಕೆ ಬರಲಾಗದೇ ಮುಳುಗಿ ಸಾವನ್ನಪ್ಪಿದ್ದಾನೆ.

ಸವದತ್ತಿಯ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.

ಅದರಂತೆ, ಬೆಳಗಾವಿಯಲ್ಲಿ ಕಲಿಯುವ ಗೋವಾ ಮೂಲದ ಇಂಜಿನೀಯರಿಂಗ ವಿದ್ಯಾರ್ಥಿ ಹಾರ್ದಿಕ ಪ್ರವೀಣ ಪಮ್ಮಾರ ಎಂಬ ಯುವಕ ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಗಡಿಯಲ್ಲಿರುವ ತಿಲಾರಿ ಫಾಲ್ಸ್ ಗೆ ಪಿಕನಿಕ್ ಗೆ ತೆರಳಿದ್ದ, ಅಲ್ಲಿ ಈಜಲು ನೀರಿಗೆ ಇಳಿದಿದ್ದಾಗ ಸೆಳುವಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ.

ಬೆಳಗಾವಿಯ ಎಸ್ ಜಿ ಬಾಳೇಕುಂದ್ರಿ ಇಂಜಿನೀಯರಿಂಗ ವಿದ್ಯಾಲಯದ ಸಿವಿಲ್ ವಿಭಾಗದ ಕೊನೆಯ 8ನೇ ಸೆಮಿಸ್ಟರ್ ನ ವಿದ್ಯಾರ್ಥಿ ಆಗಿದ್ದ. ಹಾರ್ದಿಕ ಶವನನ್ನು ವೈದ್ಯಕೀಯ ವಿಧಿವಿಧಾನದ ನಂತರ ಪಾಲಕರಿಗೆ ನೀಡಲಾಯಿತು.

You might also like
Leave a comment