This is the title of the web page

ಖೇರ್ಸನ್ ನಲ್ಲಿ ಶರಣಾದ ಉಕ್ರೇನ್ ಸೇನೆ

ಕೀವ್, 3- ಭೀಕರ ದಾಳಿ ಹಿನ್ನೆಲೆಯಲ್ಲಿ  ಖೇರ್ಸನ್ ನಲ್ಲಿ ಉಕ್ರೇನ್ ಸೇನೆಯು ರಶಿಯಾಗೆ ಶರಣಾಗತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂದು ಮುಂಜಾನೆಯೇ ಉಕ್ರೇನ್ ಮೇಲೆ ರಶಿಯಾ ರಾಕೆಟ್​ ದಾಳಿ, ಕ್ಷಿಪಣಿ ದಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದ್ದು ಹೀಗಾಗಿ ಉಕ್ರೇನ್ ಸೈನಿಕರು ಶರಣಾಗಿದ್ದಾರೆಂದು ತಿಳಿದುಬಂದಿದೆ.

ಈ ಮಧ್ಯೆ ಉಕ್ರೇನ್ ರಾಜಧಾನಿ ಕೀವ್‌ ಮೇಲೆ ಕ್ಷಿಪಣಿ ದಾಳಿ ಮುಂದುವರೆಸಿದ್ದು ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ.

ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ. ಕೀವ್, ಕೀವ್ ಒಬ್ಲಾಸ್ಟ್, ಮೈಕೊಲೈವ್, ವೊಲಿನ್ ಒಬ್ಲಾಸ್ಟ್, ಝೈಟೊಮಿರ್, ಚೆರ್ನಿಹಿವ್, ಚೆರ್ನಿಹಿವ್ ಒಬ್ಲಾಸ್ಟ್, ಇವಾನೊ-ಫ್ರಾಂಕಿವ್ಸ್ಕ್, ಎಲ್ವಿವ್, ಚೆರ್ಕಾಸಿ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ಉಕ್ರೇನ್ ನಾಗರಿಕರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ

You might also like
Leave a comment