Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಮೇಲ್ಜಾತಿಯವರು ಮೀಸಲಾತಿಗೆ ಅರ್ಹರಲ್ಲ : ಸಿದ್ದರಾಮಯ್ಯ 

siddaramaiah

ಮೈಸೂರು: ಸಂವಿಧಾನದಡಿ ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ, ಅವರಿಗೆ 10% ಮೀಸಲಾತಿ ಕೊಟ್ಟಿರುವುದು ಸರಿನಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಜಿಲ್ಲೆಯ ಎಚ್​​.ಡಿ.ಕೋಟೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಹಿಂದುಳಿದಿದ್ದಾರೋ ಅವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಯಾವ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಹೇಳಿ. ಬಸವಣ್ಣ ಅನುಭವ ಮಂಟಪ ಮಾಡಿ ಸಮಾನ ಅವಕಾಶ ಕೊಟ್ಟರು. ಅದಕ್ಕಾಗಿ ನಾವು ಬಸವಣ್ಣರಿಗೆ ಗೌರವ ಕೊಡುತ್ತೇವೆ. ಜಾತಿ ವ್ಯವಸ್ಥೆ ಇರಬಾರದು ಎಲ್ಲರೂ ಮನುಷ್ಯರಾಗಿ ಬದುಕಬೇಕು. ಅಧಿಕಾರ ಸಮಾನವಾಗಿ ಹಂಚಿಕೆಯಾದರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಾವಿಯಲ್ಲಿ ನೀರು ಸೇದಲು ಹೋಗುತ್ತಿದ್ದೆ. ಬಾವಿ ಕಸವನ್ನು ಪಕಕ್ಕೆ ತಳ್ಳಿ ನೀರು ಸೇದುತ್ತೇವೆ. ಮತ್ತೆ ಕಸ ಸೇರಿಕೊಳ್ಳುತ್ತದೆ. ಇದೇ ರೀತಿ ಸದ್ಯ ಸಮಾಜ ಆಗಿದೆ. ರಘು ಆಚಾರ ಆರ್ಥಿಕವಾಗಿ ಸಬಲರಾದ ಕಾರಣ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾನೆ ಎಂದರು.


A B Dharwadkar
the authorA B Dharwadkar

Leave a Reply