This is the title of the web page

ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ, 10- ಬೆಳಗಾವಿ ಜಿಲ್ಲೆಯ 1ರಿಂದ 9ನೇ ತರಗತಿ ವರೆಗಿನ ಎಲ್ಲ ಶಾಲೆಗಳಿಗೆ ದಿನಾಂಕ 18ರ ವರೆಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕಿತ್ತೂರಿನ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಸುಮಾರು 80 ಬಾಲಕಿಯರು ಮತ್ತು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ.

ಜ. 11ರಿಂದ 18ರ ವರೆಗೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ನೀಡಲಾಗಿದ್ದು ಕೊರೊನಾ ಮೂರನೇ ಅಲೆ ವ್ಯಾಪಿಸುತ್ತಿರುವುದರಿಂದ ಮಕ್ಕಳಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ

ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ನಂತರ ಜಿಲ್ಲಾಧಿಕಾರಿ ಎಂಜಿ ಹಿರೇಮಠ ರಜೆಯ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು.

ಕಳೆದ ಎರಡು ದಿನಗಳ ಹಿಂದೆ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿತ್ತು. 102 ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ರ್ಯಾಪಿಡ್ ಟೆಸ್ಟ್ ಜತೆಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದರು. ಎರಡು ದಿನಗಳ ಹಿಂದೆ ರ್ಯಾಪಿಡ್ ಟೆಸ್ಟ್​ನಲ್ಲಿ 12 ವಿದ್ಯಾರ್ಥಿನಿಯರಿಗೆ ಕೊವಿಡ್ ಸೋಂಕು ದೃಢ ಪಟ್ಟಿತ್ತು. ಇಂದು ಮತ್ತೆ 68 ವಿದ್ಯಾರ್ಥಿನಿಯರಿಗೆ ಸೋಂಕಿರುವುದು ಧೃಡವಾಗಿದೆ.

ಎರಡು ದಿನಗಳ ಹಿಂದೆ 12 ಇಂದು 68 ಸೇರಿ 80 ವಿದ್ಯಾರ್ಥಿಗಳಿಗೆ ಸೋಂಕು ವಕ್ಕರಿಸಿದೆ. ವಿದ್ಯಾರ್ಥಿಗಳ ಜತೆಗೆ 10 ಜನ ಶಾಲಾ ಸಿಬ್ಬಂದಿಗೂ ಸೋಂಕು ಹರಡಿದೆ. ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಸೇರಿ 90 ಜನರಿಗೆ ಕೊರೊನಾ ವೈರಾಣು ಮೈಸೇರಿದೆ.

You might also like
Leave a comment