This is the title of the web page

ಕೈಗೆಟುಕದ ಬೆಲೆಗೆ ತರಕಾರಿಗಳು ಗ್ರಾಹಕರು ಕಂಗಾಲು

ಬೆಂಗಳೂರು: ನವೆಂಬರ್ 19  ಟೊಮೇಟೊ, ಈರುಳ್ಳಿ, ಬೀನ್ಸ್ ಮಾತ್ರ ನೂರರ ಗಡಿ ದಾಟುತ್ತಿದ್ದಂತಹವು. ಇದೇ ಮೊದಲ ಬಾರಿಗೆ ಬೆಂಡೆಕಾಯಿ, ಹೀರೇಕಾಯಿ, ಬದನೆಕಾಯಿ, ತೊಗರಿಕಾಯಿಯಂತಹ ಹಲವು ತರಕಾರಿಗಳು ಸೆಂಚುರಿ ಭಾರಿಸಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಕ್ಯಾಪ್ಸಿಕಾಂ, ನುಗ್ಗೆಕಾಯಿ ಮತ್ತಿತರ ಕೆಲವು ತರಕಾರಿಗಳು ಗ್ರಾಹಕರ ಕೈಗೆಟುಕದಷ್ಟು ದುಬಾರಿಯಾಗಿವೆ.

ಮಳೆಯಿಂದಾಗಿ ಈರುಳ್ಳಿ ಬೆಲೆಯಿಂದ ಮಾತ್ರ ಫಜೀತಿಗೀಡಾಗುತ್ತಿದ್ದ ಗ್ರಾಹಕರು, ಈಗ ಎಲ್ಲಾ ರೀತಿಯ ತರಕಾರಿ, ಸೊಪ್ಪುಗಳ ದರ ಏರಿಕೆ ಬಿಸಿ ಅನುಭವಿಸುವಂತಾಗಿದೆ. ಇನ್ನೂ ಒಂದು ತಿಂಗಳು ಇದೇ ರೀತಿ ಬೆಲೆ ಏರಿಕೆ ಮುಂದುವರಿಯುವ ಮುನ್ಸೂಚನೆಯೂ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದ ತೋಟ, ಹೊಲಗಳಲ್ಲಿ ಸಾಕಷ್ಟು ನೀರು ನಿಂತಿದೆ. ತೋಟದಲ್ಲೇ ಬೆಳೆಗಳು ಕೊಳೆಯುತ್ತಿವೆ. ಇದರಿಂದ ಟೊಮೇಟೊ ಮಾತ್ರವಲ್ಲದೆ, ಈರುಳ್ಳಿ, ನುಗ್ಗೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕ್ಯಾರಟ್, ಕ್ಯಾಪ್ಸಿಕಂ ಹೀಗೆ ನಾನಾ ಬೆಳೆಗಳು ಹಾಳಾಗಿವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಉತ್ತಮ ತರಕಾರಿ ಮತ್ತು ಸೊಪ್ಪು ಸಿಗುತ್ತಿಲ್ಲ. ಹಾಗೆಯೇ ದರವೂ ದುಬಾರಿಯಾಗಿದೆ.

ಮುಂಗಾರಿನಿಂದಲೂ ರಾಜ್ಯದಲ್ಲಿ ಭರ್ಜರಿ ಮಳೆ ಸುರಿದಿದೆ. ಹಾಗೆಯೇ, ಹಿಂಗಾರು ಆರಂಭಗೊಂಡ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ನಿರಂತರ ಮಳೆ ಸುರಿಯುತ್ತಿದೆ. ಹೊಲ, ತೋಟಗಳಲ್ಲಿ ನೀರು ತುಂಬಿಕೊಂಡು ಬೆಳೆ ನಾಶವಾಗಿದೆ.

ಕಟಾವಿಗೆ ಬಂದಿರುವ ಫಸಲು ರೈತರ ಕೈಸೇರದಂತಾಗಿದೆ. ಮಳೆಯಿಂದ ಪ್ರಮುಖವಾಗಿ ತರಕಾರಿಗೆ ಹೆಚ್ಚು ಹಾನಿಯಾಗಿದೆ. ಇದರ ಪರಿಣಾಮ ರೈತರಿಗೆ ನಷ್ಟದ ಜತೆಗೆ ಗ್ರಾಹಕರಿಗೆ ತರಕಾರಿ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ. ಕಳೆದ ತಿಂಗಳಿನ ದರಗಳಿಗೂ, ಈ ತಿಂಗಳ ದರಗಳಿಗೆ ಹೋಲಿಸಿದರೆ ದರ ಎರಡರಿಂದ ನಾಲ್ಕು ಪಟ್ಟು ಏರಿಕೆಯಾಗಿದೆ. ದುಡ್ಡು ಕೊಟ್ಟರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಕಾರ್ತೀಕ ಮಾಸದ ಹಿನ್ನೆಲೆಯಲ್ಲಿ ಎಲ್ಲೆಡೆ ಮದುವೆ, ಗೃಹಪ್ರವೇಶ, ದೇವಾಲಯಗಳಲ್ಲಿ ಪೂಜೆಯಂತಹ ಶುಭ ಕಾರ್ಯಗಳು ನಡೆಯುತ್ತಿದ್ದು, ತರಕಾರಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಪೂರೈಕೆ ಕಡಿಮೆಯಿದೆ.

ಕೇವಲ ಮೂರ್ನಾಲ್ಕು ತಿಂಗಳ ಹಿಂದೆ ಮಳೆಯ ಅಭಾವದಿಂದಾಗಿ ತರಕಾರಿ ಬೆಲೆ ಏರಿಕೆಯಾಗಿತ್ತು. ಈಗ ಅತಿಯಾದ ಮಳೆ ತರಕಾರಿಯನ್ನು ದುಬಾರಿಯಾಗಿಸಿದೆ. ಕೈಗೆ ಬರಬೇಕಿದ್ದ ಬೆಳೆ ಗಿಡದಲ್ಲೇ ಕೊಳೆತುಹೋಗಿದೆ. ಕಳೆದ ವಾರ ತರಕಾರಿ ಬೆಲೆ ಎರಡು ಬಾರಿ ಏರಿಕೆ ಕಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಅನಿರೀಕ್ಷಿತ ಹಾಗೂ ನಿರಂತರವಾಗಿ ಸುರಿದ ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಮಾರುಕಟ್ಟೆಯಲ್ಲಿರಬೇಕಿದ್ದ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಕೆಲವೆಡೆ ಗಿಡಗಳಲ್ಲಿ ಬಿಟ್ಟ ಹೂವು, ಪಿಂದೆಗಳು ಕೂಡ ಉದುರುತ್ತಿವೆ. ಹೀಗಾಗಿ, ಕಾರ್ತಿಕ ಮಾಸದಲ್ಲಿ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗದೆ ಬೆಲೆಗಳು ಗಗನಕ್ಕೇರಿವೆ.

ಈರುಳ್ಳಿ ಬೆಲೆ ಮತ್ತಷ್ಟು ಏರುತ್ತದೆ:
ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸಿ ತಂದರೂ ಮೇಲ್ಭಾಗದಲ್ಲಿ ನೋಡಲು ಚೆನ್ನಾಗಿರುತ್ತವೆ. ಆದರೆ ಒಂದೆರಡು ದಿನದಲ್ಲೇ ಅವು ಕೊಳೆಯಲಾರಂಭಿಸುತ್ತವೆ. ಯಾಕೆಂದರೆ ಮಳೆಯಲ್ಲಿ ನೆಂದಿರುವುದರಿಂದ ಈರುಳ್ಳಿ ಒಳ ಪದರಗಳು ಮತ್ತು ಬುಡ, ಕೊನೆಯ ಭಾಗದಲ್ಲಿ ಕೊಳೆತು ಇಡೀ ಈರುಳ್ಳಿ ಹಾಳಾಗುತ್ತಿದೆ. ಈಗಾಗಲೇ ಈರುಳ್ಳಿ ದರ 50-60 ರೂ. ತಲುಪಿದೆ. ಅಷ್ಟು ಕೊಟ್ಟರೂ ಗುಣಮಟ್ಟವನ್ನು ಹೊಂದಿರುವುದಿಲ್ಲ. ಮುಂದುವರಿದ ಮಳೆಯಿಂದಾಗಿ ಈರುಳ್ಳಿ ಬೆಲೆಯೂ ನೂರು ರೂ. ತಲುಪುವ ಸಾಧ್ಯತೆಯಿದೆ ಎನ್ನುತ್ತಾರೆ ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳು.

ಕೋಟ್…
ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಸೀಮೆ ಬದನೆಕಾಯಿ, ಬೀಟ್‍ರೂಟ್ ಹೊರತುಪಡಿಸಿ, ಇತರೆ ಎಲ್ಲಾ ತರಕಾರಿಗಳು ಶೇ.60-70 ರಷ್ಟು ಏರಿಕೆಯಾಗಿವೆ. ಅದರಲ್ಲೂ 15 ಕೆ.ಜಿ.ಯ ಟೊಮೇಟೊ ಬಾಕ್ಸ್ ಕಳೆದ ತಿಂಗಳು 400-450 ರೂ. ಇದ್ದುದು ಇದೀಗ 1200-1500 ರೂ. ವರೆಗೆ ತಲುಪಿದೆ. ನಾಸಿಕ್‍ನಿಂದ ಬರುತ್ತಿದ್ದ ಟೊಮೇಟೊ ಮಳೆಯಿಂದಾಗಿ ಬರುತ್ತಿಲ್ಲ. ಮಳೆಯಿಂದಾಗಿ ಬಹುತೇಕ ಬೆಳೆಗಳು ಹಾಳಾಗಿವೆ. ಮಳೆ ನಿಂತ ಬಳಿಕ ಹೊಸದಾಗಿ ಬೆಳೆ ನಾಟಿ ಮಾಡಿ, ಅದು ಕೊಯ್ಲಿಗೆ ಬಂದ ನಂತರವೇ ಬೆಲೆಗಳು ಇಳಿಕೆಯಾಗುವುದು. ಅಲ್ಲಿಯವರೆಗೂ ಬೆಲೆಗಳು ಮುಂದುವರಿಯಲಿವೆ.

-ದಯಾನಂದ್, ಸಗಟು ಮಾರಾಟಗಾರರು, ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ
ಹಾಪ್‍ಕಾಮ್ ತರಕಾರಿ ದರ (ಕೆ.ಜಿ.ಗಳಲ್ಲಿ)
ಈಗಿನ ದರ ಕಳೆದ ತಿಂಗಳ ದರ
ಬಿಳಿ ಬದನೆಕಾಯಿ 92 ರೂ. 51 ರೂ.
ಟೊಮ್ಯಾಟೋ 93 ರೂ. 38-40 ರೂ.
ನುಗ್ಗೆಕಾಯಿ ದರ 234 ರೂ. 140 ರೂ.
ದಪ್ಪ ಮೆಣಸಿನಕಾಯಿ 130 ರೂ. 60 ರೂ.
ಊಟಿ ಕ್ಯಾರಟ್ 104 ರೂ. 80 ರೂ.
ನಾಟಿ ಕ್ಯಾರಟ್ 100 ರೂ. 80 ರೂ.
ಹೂಕೋಸು ಒಂದಕ್ಕೆ 54 ರೂ. 45 ರೂ.
ಬೆಂಡೆಕಾಯಿ 76 ರೂ. 52 ರೂ.
ಮೂಲಂಗಿ 62 ರೂ. 53 ರೂ.
ಹೀರೇಕಾಯಿ 90 ರೂ. 56 ರೂ.
ಮೆಂತ್ಯ ಸೊಪ್ಪು 135 ರೂ. 80 ರೂ.
ಪಾಲಾಕ್ ಸೊಪ್ಪು 100 ರೂ. 45-50 ರೂ.
ದಂಟಿನ ಸೊಪ್ಪು 72 ರೂ. 38 ರೂ.
ಸಬ್ಬಕ್ಕಿ 80 ರೂ. 53 ರೂ.
ಅರಿವೆ ಸೊಪ್ಪು 72 ರೂ. 42 ರೂ.
ಕೊತ್ತಂಬರಿ ನಾಟಿ 88 ರೂ

You might also like
Leave a comment