Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Video News

VIRAL VIDEO: ಕತ್ತೆಯನ್ನು ಕಾಪಾಡಿದ ಸೀಟ್​ ಬೆಲ್ಟ್….​! ಕಾರು ಬಂದು ಡಿಕ್ಕಿ ಹೊಡೆದರೂ ಉಳಿದ ಜೀವ


ಕಾರಿನಲ್ಲಿ ಪ್ರಯಾಣಿಸುವ ಹಿಂಬದಿ ಸವಾರರಿಗೂ ಈಗ ಸೀಟ್​ ಬೆಲ್ಟ್​ ಕಡ್ಡಾಯ ಮಾಡಲಾಗಿದ್ದು, ಇದಕ್ಕೆ ಪರ- ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಆದರೆ ಸೀಟ್​ ಬೆಲ್ಟ್​ನಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುವುದರಿಂದ ಬಚಾವಾಗಿದ್ದೂ ನಿಜ. ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಆದರೆ ಇಲ್ಲಿ ಸೀಟ್​ ಬೆಲ್ಟ್​ನಿಂದಾಗಿ ಪ್ರಾಣ ಕಾಪಾಡಿಕೊಂಡಿದ್ದು ಯಾವುದೇ ಮನುಷ್ಯರಲ್ಲ, ಬದಲಿಗೆ ಕತ್ತೆ! ಆಗಿದ್ದೇನೆಂದರೆ, ಕತ್ತೆಯನ್ನು ಕಟ್ಟಿಕೊಂಡು ಬಂಡಿಯನ್ನು ಎಳೆಯುತ್ತಾ ವ್ಯಕ್ತಿಯೊಬ್ಬ ರಸ್ತೆಯ ಮೇಲೆ ಬರುತ್ತಿದ್ದ. ಇದೇ ಸಮಯದಲ್ಲಿ ಹಿಂಬದಿಯಿಂದ ಬಂದ ಕಾರಿನ ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿರುವ ಕಾರಣ, ಅದು ಈ ಬಂಡಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕತ್ತೆ ದಿಕ್ಕಾಪಾಲಾಗಿ ಓಡಿದೆ. ಅದರ ಮೇಲೆ ಕುಳಿತ ವ್ಯಕ್ತಿ ಮತ್ತು ಕತ್ತೆಯ ಜೀವ ಎರಡನ್ನೂ ರಕ್ಷಿಸುವ ಹೊಣೆ ಈ ಕತ್ತೆಯ ಮೇಲೆಯೇ ಇತ್ತು. ಆದರೆ ಅದೃಷ್ಟವಶಾತ್​ ಕತ್ತೆಗೆ ಹಾಕಿದ್ದ ವಿಶೇಷ ರೀತಿಯ ಬೆಲ್ಟ್​ನಿಂದ ಇಬ್ಬರ ಪ್ರಾಣವೂ ಸುರಕ್ಷಿತವಾಗಿದೆ.

ಕತ್ತೆಯನ್ನು ಬಂಡಿಗೆ ಕಟ್ಟಿದ ಸಮಯದಲ್ಲಿ ಸೀಟ್​ ಬೆಲ್ಟ್​ ಹಾಕುವುದು ಸಾಮಾನ್ಯ. ಇದೇ ಸೀಟ್​ ಬೆಲ್ಟ್​ ಈಗ ಇಬ್ಬರ ಜೀವ ಕಾಪಾಡಿದೆ. ಕತ್ತೆ ಮತ್ತು ಅದರ ಮಾಲೀಕನನ್ನು ರಕ್ಷಿಸಿದ ಸೀಟ್​ ಬೆಲ್ಟ್​ ಎಂಬ ಶೀರ್ಷಿಕೆ ಜತೆಗೆ ಈ ವಿಡಿಯೋ ಭಾರಿ ವೈರಲ್​ ಆಗುತ್ತಿದೆ.


Leave a Reply