This is the title of the web page

ಕೊರೋನಾ ಕರ್ಫ್ಯೂದಲ್ಲಿ ಏನೇನು ತೆರೆದಿರುತ್ತೆ …..

ಬೆಂಗಳೂರು, 7- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೋವಿಡ್‌‌ ಸೋಂಕು ನಿಯಂತ್ರಣಕ್ಕೆ ಸರ್ಕಾರ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯದ ಕರ್ಫ್ಯೂ ಆರಂಭವಾಗಲಿದ್ದು ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಇರಲಿದೆ.

ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ ಹಾಗೂ ಯಾವುದಕ್ಕೆ ಅವಕಾಶ ನೀಡಲಾಗಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಯಾವುದಕ್ಕೆ ಅವಕಾಶ
——————
ವಾರಾಂತ್ಯದ ಅವಧಿಯಲ್ಲಿ ಅಗತ್ಯ ಸೇವೆಗಳು, ತುರ್ತು ಸೇವೆಗಳು , ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ.
* ಐಟಿ ಹಾಗೂ ಕೈಗಾರಿಕಾ ವಲಯಗಳಿಗೆ ನಿರ್ಬಂಧ ಇಲ್ಲ. ಕಂಪನಿಯ ಗುರುತಿನ ಚೀಟಿ ತೋರಿಸಿ ಕೆಲಸಕ್ಕೆ ಹಾಜರಾಗಬಹುದು.
*ರೋಗಿಗಳು ಹಾಗೂ ಅವರ ಸಂಬಂಧಿಗಳು, ಲಸಿಕೆ ತೆಗೆದುಕೊಳ್ಳುವವರು ತುರ್ತು ಸೇವೆಗಳ ಅಗತ್ಯ ಇರುವವರು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಹೊರಗೆ ಬರಬಹುದು.
* ಹಣ್ಣು ಹಾಗೂ ತರಕಾರಿ ಅಂಗಡಿ, ನ್ಯಾಯಬೆಲೆ ಅಂಗಡಿಗಳು, ಡೈರಿ ಉತ್ಪನ್ನಗಳು, ದಿನಸಿ ಅಂಗಡಿಗಳು, ಮೀನು ಹಾಗೂ ಮಾಂಸದ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ.
*ಬೀದಿ ಬದಿ ವ್ಯಾಪಾರಿಗಳೂ ವ್ಯಾಪಾರ ವ್ಯವಹಾರ ನಡೆಸಬಹುದು.
*ಮನೆ ಡೆಲಿವರಿ ಪಡೆಯುವವರಿಗೆ ಅವಕಾಶ, ರೆಸ್ಟಾರೆಂಟ್​ ಹಾಗೂ ಹೋಟೆಲ್​ಗಳಲ್ಲಿ ಪಾರ್ಸಲ್​ ನೀಡಲು ಮಾತ್ರ ಅವಕಾಶ
*ವಿರಳ ಸಂಖ್ಯೆಯಲ್ಲಿ ಬಸ್​ ಸೇವೆ, ರೈಲು ಸೇವೆ ಹಾಗೂ ವಿಮಾನ ಸೇವೆ ಇರಲಿದೆ. ಜನದಟ್ಟಣೆಗೆ ಅನುಸಾರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಇರುತ್ತದೆ.
* ಪರೀಕ್ಷೆ ಬರೆಯುವವರು ಹಾಲ್‌ ಟಿಕೆಟ್‌ ತೋರಿಸಿ ವಾಹನಗಳಲ್ಲಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದು.

* ಪ್ರಯಾಣಿಕರು ತಮ್ಮ ಟಿಕೆಟ್ ತೋರಿಸುವ ಮೂಲಕ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್​ ನಿಲ್ದಾಣಗಳಿಗೆ ಸಂಚರಿಸಬಹುದಾಗಿದೆ.
* ಪೆಟ್ರೋಲ್‌ ಬಂಕ್‌ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ
* ಮೆಟ್ರೋ ಪ್ರಯಾಣದ ಸಮಯದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ.
* ವಾರಾಂತ್ಯದ​ ಕರ್ಫ್ಯೂ ಅವಧಿಯಲ್ಲಿ ಪೂರ್ವ ನಿಗದಿತ ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ಅನುಮತಿ ಇದೆ

ಯಾವುದು ಬಂದ್‌ ಇರುತ್ತವೆ
—————————–
*ಚಿತ್ರಮಂದಿರಗಳು, ಮಾಲ್‌ಗಳು
*ವಾಹನ ಸರ್ವೀಸ್ ಸೆಂಟರ್‌ಗಳು ಕಾರ್ಯನಿರ್ವಹಿಸುವುದಿಲ್ಲ
*ಈಜು ಕೊಳಗಳು, ಜಿಮ್‌ ತೆರೆಯುವಂತಿಲ್ಲ.
* ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಬಾರ್‌ಗಳು ತೆರೆಯುವುದಿಲ್ಲ
* ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ ಶಾಪ್‌ ತೆರೆಯುವುದಿಲ್ಲ.
*ಸಾರ್ವಜನಿಕ ಉದ್ಯಾನಗಳು ಬಂದ್​ ಇರಲಿವೆ.

You might also like
Leave a comment