This is the title of the web page

ಸತ್ತ ವ್ಯಕ್ತಿ 2ನೇ ಲಸಿಕೆ ಪಡೆದಾಗ……

ಲಖನೌ, 22- ಜನವರಿ 19 ರಂದು ಪೂರ್ವ ಉತ್ತರ ಪ್ರದೇಶದ ಮಾವು ಜಿಲ್ಲೆಯ ಪತ್ರಕರ್ತ ಪ್ರವೀಣ ಸಿಂಗ್ ಅವರು ತಮ್ಮ ತಂದೆ ಕೈಲಾಶನಾಥ ಸಿಂಗ್ ಅವರ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಆರೋಗ್ಯ ಇಲಾಖೆಯಿಂದ ಪಠ್ಯ ಸಂದೇಶ ಬಂದಾಗ ದಿಗ್ಭ್ರಮೆಗೊಂಡರು.

ಸಿಂಗ್ ಅವರ ತಂದೆ ಮಾರ್ಚ 15, 2021 ರಂದು  ಒಂದು ಡೋಸ್ ಲಸಿಕೆಯನ್ನು ಪಡೆದ ಒಂಭತ್ತು ತಿಂಗಳ ನಂತರ ಹೃದಯಾಘಾತದಿಂದ ಏಪ್ರಿಲ್ 29, 2021 ರಂದು ನಿಧನರಾಗಿದ್ದರು.

ಮಧುಬನ್‌ನ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೀರಾದೇವಿ ಅವರು ಲಸಿಕೆ ಹಾಕಿದ್ದಾರೆ ಎಂದು ಲಸಿಕೆ ಪ್ರಮಾಣಪತ್ರದಲ್ಲಿ ಹೇಳಲಾಗಿದೆ. 5:39 ಕ್ಕೆ ಅವರ ತಂದೆಗೆ ಎರಡನೇ ಡೋಸ್‌ನೊಂದಿಗೆ ಲಸಿಕೆ ನೀಡಲಾಗಿದೆ ಎಂದು ಸಿಂಗ್ ಸ್ವೀಕರಿಸಿದ ಎಸ್ ಎಂ ಎಸ್ ತಿಳಿಸಿದೆ.

“ಇದು ದಾಖಲೆಗಳನ್ನು ಮಾಡುವ ಆಟವಾಗಿದೆ,” ಸಿಂಗ್ ಹೇಳಿದ್ದು ಇದು ದೋಷವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವ್ಯಾಕ್ಸಿನೇಷನ್ ಉಸ್ತುವಾರಿ ಯಾದವ ಹೇಳಿದರು.

“ಅವರ ಫೋನ್ ಸಂಖ್ಯೆಯನ್ನು ಪಡೆಯಲಾಗಿದೆ ಮತ್ತು ಆ ಸಂಖ್ಯೆಯಲ್ಲಿ ಎರಡನೇ ಡೋಸ್ ಲಸಿಕೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಫೋನ್ ಸಂಖ್ಯೆಯ ತಪ್ಪು ಅಂಕಿ ಸಲ್ಲಿಕೆ ಮತ್ತು ಪರಿಶೀಲನಾ ಸಿಬ್ಬಂದಿಯ ವೈಫಲ್ಯದ ಕಾರಣದಿಂದಾಗಿ ಇದು ತಾಂತ್ರಿಕ ದೋಷ ಎಂದು ಪ್ರಾಥಮಿಕವಾಗಿ ತೋರುತ್ತಿದೆ ಎಂದು ಯಾದವ ಹೇಳಿದರು.

ನಮ್ಮ ರಾಜ್ಯದಲ್ಲಿಯೂ ಲಸಿಕೆಯ ಎರಡನೇ ಡೋಸ್ ಪಡೆಯದಿದ್ದರೂ ಸಹ ಹಲವರಿಗೆ ಲಸಿಕೆ ಪಡೆದಿರುವ ಬಗ್ಗೆ ಸಂದೇಶಗಳು ಬಂದಿರುವುದನ್ನು ಕಾಣುತ್ತಿದ್ದೇವೆ.

You might also like
Leave a comment