Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

21ನೇ ಶತಮಾನದಲ್ಲಿ ಧರ್ಮದ ಹೆಸರಲ್ಲಿ ನಾವೆಲ್ಲಿ ತಲುಪಿದ್ದೇವೆ ? -ಸುಪ್ರೀಮ ಕೋರ್ಟ ಪ್ರಶ್ನೆ


ಹೊಸದಿಲ್ಲಿ: ದ್ವೇಷ ಭಾಷಣಗಳ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಮ ಕೋರ್ಟ, ಅಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ನ್ಯಾಯಾಲಯವು ಈ ವಿಷಯದ ಬಗ್ಗೆ ತನ್ನ ಕೆಲವು ಬಲವಾದ ಹೇಳಿಕೆಗಳನ್ನು ನೀಡಿತು. ಇದು 21ನೇ ಶತಮಾನ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ ಎಂದು ನ್ಯಾಯಾಲಯವು ದ್ವೇಷ ಭಾಷಣಗಳ ಅರ್ಜಿಯ ವಿಚಾರಣೆ ವೇಳೆ ಪ್ರಶ್ನಿಸಿತು. ಧರ್ಮ-ತಟಸ್ಥವಾಗಿದೆ ಎಂದು ಹೇಳಲಾಗುವ ದೇಶಕ್ಕೆ ಭಾರತದಲ್ಲಿನ ಪರಿಸ್ಥಿತಿಯು ಆಘಾತಕಾರಿಯಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ ರಾಯ್ ಅವರನ್ನು ಒಳಗೊಂಡ ಪೀಠವು ಮುಸ್ಲಿಮ ಸಮುದಾಯದ ವಿರುದ್ಧ ಹೆಚ್ಚುತ್ತಿರುವ ಬೆದರಿಕೆ ಮತ್ತು ಗುರಿಯನ್ನು ತಡೆಯಲು ತುರ್ತು ಮಧ್ಯಪ್ರವೇಶವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಭಾರತದಲ್ಲಿ ಮುಸ್ಲಿಮ ಸಮುದಾಯವನ್ನು ಗುರಿಯಾಗಿಸುವ ಮತ್ತು ಹೆದರಿಸುವ ಹೆಚ್ಚುತ್ತಿರುವ ಪಿಡುಗನ್ನು ನಿಲ್ಲಿಸಲು ತುರ್ತು ಮಧ್ಯಪ್ರವೇಶವನ್ನು ಕೋರಿ ಸಲ್ಲಿಸಲಾದ ಮನವಿಗೆ ಸುಪ್ರೀಮ ಕೋರ್ಟ ಕೇಂದ್ರ ಮತ್ತು ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು.

ದೇಶಾದ್ಯಂತ ದ್ವೇಷದ ಅಪರಾಧಗಳು ಮತ್ತು ದ್ವೇಷ ಕುರಿತ ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಮ ಕೋರ್ಟ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಸಮಸ್ಯೆಯನ್ನು ನಿಭಾಯಿಸಲು ಏನಾದರೂ ಮಾಡಬೇಕಾಗಿದೆ ಮತ್ತು ದ್ವೇಷ ಭಾಷಣಗಳನ್ನು ಮಾಡುವ ಅಥವಾ ದ್ವೇಷದ ಅಪರಾಧಗಳಲ್ಲಿ ತೊಡಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ದ್ವೇಷ ಭಾಷಣಗಳನ್ನು ನಿಗ್ರಹಿಸಲು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಇತರ ಕಠಿಣ ನಿಬಂಧನೆಗಳನ್ನು ಅನ್ವಯಿಸುವಂತೆ ಅಬ್ದುಲ್ಲಾ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ದ್ವೇಷ ಭಾಷಣಗಳಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ಸದಸ್ಯರು ಭಾಗವಹಿಸುವ ಮೂಲಕ ಮುಸ್ಲಿಮ ಸಮುದಾಯವನ್ನು ಗುರಿಯಾಗಿಸಿ ಹೆದರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.


A B Dharwadkar
the authorA B Dharwadkar

Leave a Reply