This is the title of the web page

ಯಾರ ಅನುಮತಿ ಬೇಕಿಲ್ಲ, “ಮಹಾಮೇಳ” ನಿಶ್ಚಿತವಾಗಿ ಮಾಡುತ್ತೇವೆ : ಎಂಇಎಸ್

ಬೆಳಗಾವಿ, 12- ಬೆಳಗಾವಿಯ ವಿಧಾನ ಮಂಡಲ ಅಧಿವೇಶನದ ಮೊದಲನೇ ದಿನ ಪ್ರತಿಭಟನಾತ್ಮಕವಾಗಿ ಅದಕ್ಕೆ ಪರ್ಯಾಯವಾಗಿ ಖಂಡಿತವಾಗಿ “ಮಹಾಮೇಳ” ಆಯೋಜಿಸುವದಾಗಿ ಎಂಇಎಸ್ ಹೇಳಿದೆ.

ನಾಡವಿರೋಧಿ ಸಂಘಟನೆ “ಮಹಾರಾಷ್ಟ್ರ ಏಕೀಕರಣ ಸಮಿತಿ” (ಎಂಇಎಸ್) ನಾಳೆ ಡಿ.13ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಿದೆ.

ಸರಕಾರಕ್ಕೆ ಅನುಮತಿ ಕೋರಲಾಗಿದೆ. ಇನ್ನೂ ದೊರೆತ್ತಿಲ್ಲ, ಅದರ ಅಗತ್ಯವೂ ನಮಗೆ ಇಲ್ಲ. ಸಭೆ ಮಾಡೇ ಮಾಡುತ್ತೇವೆ ಎಂದು ಎಂಇಎಸ್ ಹೇಳಿದೆ.

ಮಹಾಮೇಳಾವದಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರದ ಸಚಿವರಾದ ಏಕನಾಥ ಶಿಂಧೆ, ಹಸನ್‌ ಮುಷ್ರಿಫ್‌, ಛಗನ್‌ ಭುಜಬಲ್‌ ಮತ್ತು ಆ ರಾಜ್ಯದ ಮುಖಂಡರಿಗೆ ಆಹ್ವಾನ ನೀಡಲಾಗಿದೆ.

‘ಮರಾಠಿ ಭಾಷಿಕರ ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರ ಇಲ್ಲಿ ಅಧಿವೇಶನ ನಡೆಸುತ್ತಿದೆ. ಹಾಗಾಗಿ ಅದಕ್ಕೆ ಪರ್ಯಾಯವಾಗಿ ಮಹಾಮೇಳ ಸಂಘಟಿಸುತ್ತಿದ್ದೇವೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿಲ್ಲ. ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಎಂಇಎಸ್‌ ಅಧ್ಯಕ್ಷ ದೀಪಕ ದಳವಿ ತಿಳಿಸಿದ್ದಾರೆ.

ಮಹಾಮೇಳಕ್ಕೆ ಅನುಮತಿ ನೀಡಿಲ್ಲ. ಆದರೂ, ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ವ್ಯಾಕ್ಸಿನ್‌ ಡಿಪೊಗೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇವೆ. ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ’ ಎಂದು ಟಿಳಕವಾಡಿ ಠಾಣೆ ಇನ್‌ಸ್ಪೆಕ್ಟರ್‌ ರಾಘವೇಂದ್ರ ಹವಾಲ್ದಾರ ತಿಳಿಸಿದ್ದಾರೆ.

You might also like
Leave a comment