This is the title of the web page

ಹಿಂಡಲಗಾ ಗಣೇಶ ಮಂದಿರ ಬಳಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆಯ ಆತ್ಮಹತ್ಯೆ

ಬೆಳಗಾವಿ, 11- ಇಲ್ಲಿನ ಹಿಂಡಲಗಾ ಗಣಪತಿ ಮಂದಿರದ ಬಳಿಯಿರುವ ಕೆರೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಬಿದ್ದು ಸಹ್ಯಾದ್ರಿ ನಗರದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಾ ಎಂಬ ಹೆಸರಿನ 36 ವರುಷದ ಮಹಿಳೆಯು ತಮ್ಮ ಮಕ್ಕಳಾದ 4 ವರುಷದ ಭಾವೀರ ಹಾಗೂ ವೀರೇನ್ ಎಂಬವರೊಂದಿಗೆ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣಾ ಹಾಗೂ ಭಾವೀರ ಅವರ ಮೃತ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ವೀರೇನ್ ಅವರ ಶೋಧ ನಡೆದಿತ್ತು.

ಕೃಷ್ಣಾ ಅವರ ಈ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಕ್ಯಾಂಪ್ ಪೊಲೀಸರು ತನಿಖೆ ನಡೆಸಿದ್ದಾರೆ.

You might also like
Leave a comment