Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಹೆಣ್ಣು ಮಗುವಿಗೆ ಜನ್ಮ ನೀಡಿದ 7 ತಿಂಗಳಿಂದ ಕೋಮಾದಲ್ಲಿರುವ ಮಹಿಳೆ

aims

ಹೊಸದಿಲ್ಲಿ: ರಸ್ತೆ ಅಪಘಾತದಲ್ಲಿ ತಲೆಗೆ ಗಾಯವಾದ ನಂತರ ಮಹಿಳೆಗೆ ಅನೇಕ ಶಸ್ತ್ರಚಿಕಿತ್ಸೆ ಮಾಡಲಾಗಿದ್ದರೂ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಮಲಗಿದ್ದಾರೆ. ಆದರೆ ಅಚ್ಚರಿಯೋ ಎಂಬಂತೆ ಮಹಿಳೆ ದೆಹಲಿ ಏಮ್ಸ್​​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಉತ್ತರ ಪ್ರದೇಶದ ಬುಲಂದ‌ಶಹರ್‌ನ 23 ವರ್ಷದ ಮಹಿಳೆ ಕಳೆದ 7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅಪಘಾತದ ಸಮಯದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು.

ಇದೇ ವರ್ಷದ ಮಾರ್ಚ್ 31 ರಂದು ನಡೆದ ಅಪಘಾತದಲ್ಲಿ ಮಹಿಳೆಯ ತಲೆಗೆ ಆಳವಾದ ಮತ್ತು ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ ಆಕೆಯ ಪ್ರಾಣ ಉಳಿಯಿತಾದರೂ ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ನರಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ದೀಪಕ್ ಗುಪ್ತಾ ಹೇಳುವ ಪ್ರಕಾರ, ಮಹಿಳೆ ಏನನ್ನೂ ಅರ್ಥಮಾಡಿಕೊಳ್ಳುವ ಅಥವಾ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ಹೆಲ್ಮೆಟ್ ಧರಿಸಿದ್ದರೆ ಅವರ ಜೀವನ ವಿಭಿನ್ನವಾಗಿರುತ್ತಿತ್ತು. ಬಹುಶಃ ಈಗ ಅವರು ಚೆನ್ನಾಗಿರುತ್ತಿದ್ದರು ಡಾ. ಗುಪ್ತಾ ಹೇಳುತ್ತಾರೆ.

ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಈ ಅಪಘಾತದ ನಂತರ ಹೆಂಡತಿಯನ್ನು ನೋಡಿಕೊಳ್ಳಲು ಆತ ತನ್ನ ಕೆಲಸ ತೊರೆದಿದ್ದಾನೆ.

ಅಪಘಾತದ ನಂತರ ಮಹಿಳೆಯನ್ನು ಏಮ್ಸ್‌ಗೆ ಕರೆತಂದಾಗ ಅವರು 40 ದಿನಗಳ ಗರ್ಭಿಣಿಯಾಗಿದ್ದರು. ಆಗ ಹೊಟ್ಟೆಯೊಳಗಿನ ಮಗು ಆರೋಗ್ಯವಾಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದರು.

ಆಕೆಯ ಪತಿ ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಸದ್ಯ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲ. ಮಗುವಿಗೆ ಬಾಟಲಿಯಿಂದ ಹಾಲು ನೀಡಲಾಗುತ್ತಿದೆ.


A B Dharwadkar
the authorA B Dharwadkar

Leave a Reply