This is the title of the web page

ಒಂಟಿ ಮಹಿಳೆಯ ಬರ್ಬರ ಹತ್ಯೆ

 

ಬೆಳಗಾವಿ, ೧೫- ಮಹಿಳೆಯೊಬ್ಬರನ್ನು ಹತ್ಯೆಗೈದು ಬಂಗಾರ, ಹಣದೊಂದಿಗೆ ದರೋಡೆಕೋರರು ಪರಾರಿಯಾದ ಘಟನೆ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ.

ಮಾಲುತಾಯಿ ಕೊಲೆಯಾದ ದುರ್ದೈವಿ. ಇವರು ಗ್ರಾಮದ ನಿವೃತ್ತ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಭೀಮರಾಯರವರ ಎರಡನೇ ಪತ್ನಿ.

ಪತಿ ಭೀಮರಾಯ ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಮೊದಲ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದಾರೆ.

ಮಾಲುತಾಯಿ ಒಂಟಿಯಾಗಿರುವುದನ್ನು ಗಮನಿಸಿದ ದರೋಡೆಕೋರರು ಮಹಿಳೆ ಬಾಯಲ್ಲಿ ಬಟ್ಟೆ ತುರುಕಿ ಕೊಲೆ ಮಾಡಿ ಮನೆಯಲ್ಲಿದ್ದ ಬಂಗಾರ, ಹಣ ತಗೆದುಕೊಂಡು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶ್ವಾನ ಮತ್ತು ಎಫ್ ಎಸ್ ಎಲ್ ತಂಡದೊಂದಿಗೆ ಪೋಲಿಸ್ ಇನ್ಸ್‌ಪೆಕ್ಟರ್ ರಮೇಶ ಛಾಯಾಗೋಳ ಆಗಮಿಸಿ ಪರಶೀಲನೆ ಮಾಡಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇದೇ ರೀತಿ ಗ್ರಾಮದಲ್ಲಿ ಸಣ್ಣ ಪುಟ್ಟ ಕಳವು ಆಗುತ್ತಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

You might also like
Leave a comment