This is the title of the web page

ಫೆ. 6 ರಂದು ಧಾರವಾಡದಲ್ಲಿ ಮಹಿಳಾ ಉದ್ಯೋಗ ಮೇಳ

ಧಾರವಾಡ ಫೆ. 1- ಮಹಿಳಾ ಸಬಲೀಕರಣದ ಭಾಗವಾಗಿ ರ್ಯಾಪಿಡ್ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ದಿ. 6 ರಂದು ಇಲ್ಲಿನ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಹಿಳೆಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರ್ಯಾಪಿಡ್ ಸಂಸ್ಥೆಯ ಸಿಇಒ ಮಾಳವಿಕಾ ಕಡಕೋಳ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗಮೇಳ ಫೆ.06 ರಂದು ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ ಜರುಗಲಿದೆ ಎಂದರು.
ಮೇಳದಲ್ಲಿ 35 ರಿಂದ 40 ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 20 ಸಂಸ್ಥೆಗಳು ಹೆಸರು ನೋಂದಾಯಿಸಿವೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಬಿಇಡಿ ಪದವಿ ಹೊಂದಿದವರು ಭಾಗವಹಿಸ ಬಹುದು. ವಿದ್ಯಾರ್ಹತೆ ಇಲ್ಲದ, ಹೊಲಿಗೆ, ವಸ್ತ್ರವಿನ್ಯಾಸ ಸೇರಿದಂತೆ ಇತರ ಕೌಶಲ, ಹೆಲ್ಪರ್, ಕ್ಲೀನರ್, ಭದ್ರತೆ ಹಾಗೂ ಶುಶ್ರೂಷಕ ಹುದ್ದೆ ಬಯಸುವ ವರು ಭಾಗವಹಿಸಬಹುದು. ಬಹಳಷ್ಟು ಉದ್ಯೋಗಗಳು ಜಿಲ್ಲೆಯ ವ್ಯಾಪ್ತಿಯಲ್ಲೇ ಇವೆ. ಕೆಲ ಉದ್ಯೋಗ ಗಳು ಬೆಂಗಳೂರಿನಲ್ಲಿವೆ. ಮಾಹಿತಿಗೆ 0836-2462202 ಸಂಪರ್ಕಿಸ ಬಹುದು’ ಎಂದು ತಿಳಿಸಿದರು.

ಜೆಎಸ್‍ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಕೌಶಲಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಡಾ. ಚಂದ್ರಪ್ಪ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯ ಕಾರ್ಯದರ್ಶಿ ಅಂಜನಾ ಬಸನಗೌಡರ ಇತರರು ಗೋಷ್ಠಿ ಯಲ್ಲಿದ್ದರು.

You might also like
Leave a comment