Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಪತ್ನಿ ಮನೆ ಕೆಲಸ ಮಾಡುವುದು ಕ್ರೌರ್ಯವಲ್ಲ : ಬಾಂಬೆ ಹೈಕೋರ್ಟ 

mumbai highcourt

ಮುಂಬೈ: ಪತ್ನಿಗೆ ಮನೆ ಕೆಲಸ ಮಾಡುವಂತೆ ಹೇಳುವುದು ಕ್ರೌರ್ಯವಲ್ಲ ಎಂದು ಬಾಂಬೆ ಹೈಕೋರ್ಟ‌ನ ಔರಂಗಾಬಾದ ಪೀಠ ಪತಿ ವಿರುದ್ಧದ ಎಫ್‌ಐಆರ್  ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ ಪಾಟೀಲ ಅವರ ವಿಭಾಗೀಯ ಪೀಠ ವ್ಯಕ್ತಿ ಮತ್ತು ಅವನ ಪೋಷಕರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ ರದ್ದುಗೊಳಿಸಿದೆ.

ಮದುವೆಯಾದ ಒಂದು ತಿಂಗಳ ಕಾಲ ನನ್ನನ್ನು ಮನೆಯವರೆಲ್ಲರೂ ಚೆನ್ನಾಗಿ ನೋಡಿಕೊಂಡರು. ನಂತರ ಮನೆಯವರೆಲ್ಲರೂ ನನ್ನನ್ನು ಮನೆ ಕೆಲಸದವರಂತೆ ಕಾಣುತ್ತಿದ್ದರು. ನನ್ನನ್ನು ಸೇವಕಿ ಎಂಬಂತೆ ಭಾವಿಸುತ್ತಿದ್ದರು. ಪತಿ ಮನೆಯವರು ಕಾರು ಖರೀದಿಸಲು 4 ಲಕ್ಷಕ್ಕೆ ಕೊಡುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.

ಮಹಿಳೆ ತನಗೆ ಕಿರುಕುಳ ನೀಡಿರುವುದಾಗಿ ಹೇಳಿದ್ದಾಳೆ. ಆದರೆ ತನ್ನ ದೂರಿನಲ್ಲಿ ಅಂತಹ ಯಾವುದೇ ಕೃತ್ಯವನ್ನು ನಿರ್ದಿಷ್ಟಪಡಿಸಿಲ್ಲ ಎಂದು ಹೈಕೋರ್ಟ ತನ್ನ ಆದೇಶದಲ್ಲಿ ಗಮನಿಸಿದೆ.

ಮದುವೆಯಾದ ಹೆಂಗಸನ್ನು ಕುಟುಂಬಕ್ಕಾಗಿ ಮನೆ ಕೆಲಸ ಮಾಡಲು ಕೇಳಿದರೆ, ಅದನ್ನು ಸೇವಕಿಯಂತೆ ಎಂದು ಹೇಳಲಾಗುವುದಿಲ್ಲ. ಮನೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮದುವೆಗೂ ಮೊದಲೇ ಈ ವಿಷಯ ತಿಳಿಸಬೇಕಿತ್ತು. ಆಗ ಮದುವೆಯ ಬಗ್ಗೆ ಆತನ ಮನೆಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಕೆಲಸ ಮಾಡು ಅಂತಾ ಹೇಳುವುದನ್ನು ಮಾನಸಿಕ, ದೈಹಿಕ ದೌರ್ಜನ್ಯ ಎಂದು ಹೇಳಲಾಗದು. ಯಾವ ರೀತಿಯ ದೌರ್ಜನ್ಯ ನಡೆದಿದೆ ಎಂದು ವಿವರಿಸಬೇಕು. ವಿವರಿಸದಿದ್ದರೆ ಅದನ್ನು ಪತಿ ನಡೆಸಿದ ದೌರ್ಜನ್ಯ ಎಂದು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.


A B Dharwadkar
the authorA B Dharwadkar

Leave a Reply