This is the title of the web page

ವಿದೇಶದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಆಸ್ತಿ ಮಾಡಿದ್ದಾರೆ : ಯತ್ನಾಳ

 

ಹಾವೇರಿ, ೧೭- ಸೋನಿಯಾ ಗಾಂಧಿ ಮಾತ್ರ ಜೈಲಿಗೆ ಹೋಗಲ್ಲ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಕೂಡ ಜೈಲಿಗೆ ಹೋಗಲಿದ್ದಾರೆ ಎಂದು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದುಬೈ, ಮಾರಿಷಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಆಸ್ತಿ ಹೊಂದಿದ್ದಾರೆ. ಅದಕ್ಕೆ ಆಗಾಗ ದುಬೈ, ಮಾರಿಷಸ್ ಗೆ ಹೋಗುತ್ತಾರೆ ಎಂದರು.

ಯಡಿಯೂರಪ್ಪ ಆಪ್ತ ಉಮೇಶ ಮನೆಯಲ್ಲಿ ಸಿಕ್ಕ 10 ಕೋಟಿ ಹಣ ಯಡಿಯೂರಪ್ಪ  ಮತ್ತು ವಿಜಯೇಂದ್ರಗೆ ಸೇರಿದ್ದಾಗಿದೆ. ಈ ಪ್ರಕರಣದಲ್ಲಿಯೇ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.

You might also like
Leave a comment