This is the title of the web page

ತನ್ನ ಬೆತ್ತಲೆ ಫೋಟೊ ತಾನೇ ಶೇರ್ ಮಾಡಿದ ಬಿಜೆಪಿ ನಾಯಕನ ಯಡವಟ್ಟು

ಬೆಳಗಾವಿ. ಜ.೨೭- ನಗರದ ಬಿಜೆಪಿ ನಾಯಕರೊಬ್ಬರು ತಮ್ಮ ನಗ್ನ ಚಿತ್ರವನ್ನು ತಾವೇ ವಾಟ್ಸಪ್ ಗ್ರುಪ್ ಒಂದರಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಭಾರಿ ಮುಜುಗರಕ್ಕೀಡಾಗಿರುವ ಘಟನೆ ಜರುಗಿದೆ.

ಬೆಳಗಾವಿ ಬಿಜೆಪಿಯ ಮಹಾನಗರ ಘಟಕದ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ ಎಂಬುವರೇ ಇಂಥ ಎಡವಟ್ಟು ಮಾಡಿಕೊಂಡಿರುವ ನಾಯಕ.
ತಮ್ಮ ಗುಪ್ತಾಂಗ ಕಾಣಿಸುವ ರೀತಿಯಲ್ಲಿ ಬೆತ್ತಲೆಯಾಗಿ ಮಲಗಿದ ಭಂಗಿಯ ಅವರ ಫೋಟೊ ಅವರದೇ ನಂಬರಿನಿಂದ ವಾಟ್ಸಪ್ ಗ್ರೂಪ್ ಗೆ ನಾಲ್ಕೈದು ದಿನಗಳ ಹಿಂದೆ ಮಧ್ಯರಾತ್ರಿ ಸಮಯದಲ್ಲಿ ಶೇರ್ ಆಗಿದೆ.

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೇ ಇದ್ದ ಬಿಜೆಪಿ ಕರ್ನಾಟಕ ದಕ್ಷಿಣ ಮಂಡಲ ಎಂಬ ವಾಟ್ಸಪ್ ಗ್ರುಪ್ ನಲ್ಲಿ ಫೋಟೊ ಕಾಣಿಸಿಕೊಂಡಿದೆ. ಇದರ ನಂತರ ಭಾರಿ ಮುಜುಗರಕ್ಕೀಡಾದ ಬಿಜೆಪಿ ಮಹಿಳಾ ನಗರಸೇವಕಿ ಸೇರಿದಂತೆ ಗ್ರುಪ್ ನಲ್ಲಿದ್ದ ಮಹಿಳೆಯರು ಗ್ರುಪ್ ಬಿಟ್ಟಿದ್ದಾರೆ.

ಶಶಿಕಾಂತ ಪಾಟೀಲರು ಬೆತ್ತಲೆ ಚಿತ್ರ ಪೋಸ್ಟ್ ಮಾಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಗ್ರುಪ್ ಅಡ್ಮಿನ್ ಗ್ರುಪ್ ನಿಂದ ಎಲ್ಲರನ್ನು ತೆಗೆದು ಹಾಕಿ ಗ್ರೂಪ್ ಡಿಲೀಟ್ ಮಾಡಿದ್ದಾರೆ.

ಗೋವಾ ಚುನಾವಣೆಯ ಪ್ರಚಾರಕ್ಕಾಗಿ ತೆರಳಿದ ವೇಳೆ ಅಲ್ಲಿನ ಹೊಟೇಲೊಂದರಲ್ಲಿ ತೆಗೆದ ಫೋಟೊ ಇದೆಂದು ಹೇಳಲಾಗುತ್ತಿದೆ. ಸದ್ಯ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ಬಿಜೆಪಿ ಮುಖಂಡನ ಬೆತ್ತಲೆ ಚಿತ್ರದ ವಿಷಯ ಗೋವಾದ ಪ್ರತಿಪಕ್ಷಗಳಿಗೆ ಭಾರಿ ಅಸ್ತ್ರ ಸಿಕ್ಕಂತಾಗಿದೆ.

ಗ್ರುಪ್ ನಲ್ಲಿ ಇದ್ದ ಕೆಲವರು ಈ ಫೋಟೊ ಶೇರ್ ಮಾಡಿದ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಬೇರೆ ಕಡೆ ಶೇರ್ ಮಾಡುತ್ತಿದ್ದು, ಚಿತ್ರ ಭಾರಿ ವೈರಲ್ ಆಗುತ್ತಿದೆ.

You might also like
Leave a comment