Please assign a menu to the primary menu location under menu

State

ಯಡಿಯೂರಪ್ಪ ಆರೋಪ ಮುಕ್ತರಾಗ್ತಾರೆ : ಮುಖ್ಯಮಂತ್ರಿ ಬೊಮ್ಮಾಯಿ


ಕಲಬುರಗಿ : ಯಡಿಯೂರಪ್ಪ ಅವರ ವಿರುದ್ಧ ಈ ಹಿಂದೆ ಇಂತಹ ಹಲವು ಪ್ರಕರಣಗಳು ದಾಖಲಾಗಿ ವಿಫಲಗೊಂಡಿವೆ. ಅದರಂತೆ ಈ ಪ್ರಕರಣ ಕೂಡಾ ವಿಫಲವಾಗಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ 2022 ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬಿಡಿಎ ವಸತಿ ಯೋಜನೆ ಅವ್ಯವಹಾರ ವಿಷಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯುರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವಾಗ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆಂಬ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯ ಲೋಕಾಯುಕ್ತದಲ್ಲಿ ಯಡಿಯೂರಪ್ಪ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಈ ಹಿಂದೆ ಇಂತಹ ಹಲವು ಪ್ರಕರಣಗಳು ದಾಖಲಾಗಿ ವಿಫಲಗೊಂಡಿವೆ. ಅದರಂತೆ ಇದು ಕೂಡಾ ಒಂದು. ಯಡಿಯೂರಪ್ಪ ಇದರಲ್ಲಿಯೂ ಆರೋಪ ಮುಕ್ತರಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ ವಿಷಯವಾಗಿ ಮಾತನಾಡಿದ ಅವರು, ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.


Samadarshi News

Leave a Reply